ಮನೆಗೆ ನುಗ್ಗಿ ಮಹಿಳೆ, ಪುತ್ರನಿಗೆ ತಂಡದಿಂದ ಹಲ್ಲೆ: ಐದು ಮಂದಿ ವಿರುದ್ಧ ಕೇಸು

ಕುಂಬಳೆ: ಮನೆಗೆ ನುಗ್ಗಿದ ತಂಡವೊಂದು ಮಹಿಳೆ ಹಾಗೂ ಪುತ್ರನಿಗೆ ಹಲ್ಲೆಗೈದು ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಐದು ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕುಂಬಳೆ ಬಳಿಯ ಮಾವಿನ ಕಟ್ಟೆ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಮೊಹಮ್ಮದ್ ಅಶ್ರಫ್‌ರ ಪತ್ನಿ ಸಫಿಯ ಪಿ.ಎ ಹಾಗೂ ಪುತ್ರ ಅಸೀಸ್‌ಗೆ ತಂಡ ಹಲ್ಲೆಗೈದಿರುವು ದಾಗಿ  ದೂರಲಾಗಿದೆ. ಸಫಿಯಾರ ಇನ್ನೋರ್ವ ಪುತ್ರ ಅನ್ಸೀಪ್‌ರ ಕೈಯಲ್ಲಿ ಅಬುದಾಬಿಯಿಂದ ಚಿನ್ನ ಕಳುಹಿಸಿ ಕೆಟ್ಟಿರುವುದಾಗಿಯೂ ಅದು ವಾರೀಸುದಾರರಿಗೆ ಲಭಿಸಿಲ್ಲ ವೆಂದು ಆರೋಪಿಸಿ ಮೊನ್ನೆ ಸಂಜೆ ಐದು ಮಂದಿ ಹಲ್ಲೆಗೈದಿರುವುದಾಗಿ ದೂರ ಲಾಗಿದೆ. ಈ ಸಂಬಂಧ ಸಿನಾನ್ ಹಾಗೂ ಕಂಡರೆ ಪತ್ತೆಹಚ್ಚ ಬಹುದಾದ ಇತರ ನಾಲ್ಕು ಮಂದಿ  ವಿರುದ್ಧ ಕೇಸು ದಾಖಲಿಸಿಕೊಂಡಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page