ಮನೆ ಬಳಿಯಿಂದ ಬೈಕ್ ಕಳವು ಸಿಸಿ ಕ್ಯಾಮರಾದಲ್ಲಿ ಕಳ್ಳನ ಚಿತ್ರ ಪತ್ತೆ

ಉಪ್ಪಳ: ಮನೆ ಬಳಿ ನಿಲ್ಲಿಸಿದ್ದ ಬೈಕ್‌ನ್ನು ರಾತ್ರಿ ಹೊತ್ತಿನಲ್ಲಿ ಕಳವುಗೈದ ಘಟನೆ ನಡೆದಿದೆ.

ಕುಂಜತ್ತೂರು ಪಳ್ಳ ನಿವಾಸಿಯೂ, ನಿವೃತ್ತ ಪೋಸ್ಟ್‌ಮೆನ್ ಭಾಸ್ಕರ ಎಂಬವರ ಪಲ್ಸರ್ ಬೈಕ್ ಈ ತಿಂಗಳ ೧೪ರಂದು ರಾತ್ರಿ ಕಳವಿಗೀಡಾಗಿದೆ. ಮನೆ ಬಳಿ ನಿಲ್ಲಿಸಿದ್ದ ಬೈಕ್ ೧೫ರಂದು ಬೆಳಿಗ್ಗೆ ನೋಡಿದಾಗ ನಾಪತ್ತೆಯಾಗಿತ್ತು. ಈ ಬಗ್ಗೆ ಭಾಸ್ಕರ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ಶೋಧ ನಡೆಸುತ್ತಿದ್ದಾರೆ. ಇದೇ ವೇಳೆ ಮನೆಯ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ೧೪ರಂದು ರಾತ್ರಿ ೧೧.೩೬ರ ವೇಳೆ ವ್ಯಕ್ತಿಯೋರ್ವ ಬೈಕ್‌ನಲ್ಲಿ ಮನೆ ಬಳಿಯಿಂದ ದೂಡಿಕೊಂಡು ರಾಷ್ಟ್ರೀಯ ಹೆದ್ದಾರಿಯತ್ತ ಸಾಗಿಸುತ್ತಿರುವುದು ಕಂಡು ಬಂದಿದೆ. ಆ ದೃಶ್ಯವನ್ನು ಪೊಲೀಸರು ಸಂಗ್ರಹಿಸಿಕೊಂಡಿದ್ದು, ಅದರ ಆಧಾರದಲ್ಲಿ ಕಳ್ಳರಿಗಾಗಿ ಶೋಧ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page