ಮಳ್‌ಹರ್ ರಜತ ಜ್ಯುಬಿಲಿ ಸ್ನೇಹ ಸಂದೇಶದೊಂದಿಗ ಮಾನವ ಸಂಗಮ

ಮಂಜೇಶ್ವರ: ಮಂಜೇಶ್ವರ ಮಳ್‌ಹರ್ ನೂರಿಲ್ ಇಸ್ಲಾಮಿತ ಅಲಿಮಿಯದ ರಜತ ವಾರ್ಷಿಕ ಆಚರಣೆ, ಮುಹಮ್ಮದ್ ಉಮರುಲ್ ಫಾರೂಕ್ ಅಲ್ ಬುಖಾರಿಯವರ ಉರೂಸ್‌ನ ಅಂಗವಾಗಿ ಎರಡನೇ ದಿನ ಮಾನವ ಸಂಗಮ ಜರಗಿತು. ಮಳ್‌ಹರ್ ಉಪಾಧ್ಯಕ್ಷ ಅಬ್ದುಲ್ ರಹ್‌ಮಾನ್ ಶಹೀರ್ ಅಲ್ ಬುಖಾರಿ ಅಧ್ಯಕ್ಷತೆ ವಹಿಸಿದ್ದು,  ಫಾದರ್ ಎಡ್ವಿನ್ ಫ್ರಾನ್ಸಿಸ್ ಪಿಂಟೋ ಉದ್ಘಾಟಿಸಿದರು. ಮಳ್‌ಹರ್ ಪ್ರಧಾನ ಕಾರ್ಯದರ್ಶಿ ಅಹಮ್ಮದ್ ಜಲಾಲುದ್ದೀನ್ ಅಲ್ ಬುಖಾರಿ ಪ್ರವಚನ ನೀಡಿದರು. ಮುಸ್ತಫ ನೈಮಿ ಹಾವೇರಿ ಠರಾವು ಮಂಡಿಸಿದರು. ಮಂಜೇಶ್ವರ ಸ್ನೇಹಾಲಯದ ಅಧ್ಯಕ್ಷ ಜೋಸೆಫ್, ಸಿಪಿಎಂನ ಜಯಾನಂದ, ಸಿಪಿಐಯ ಮುಸ್ತಫ, ಮಂಜೇಶ್ವರ ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್, ಮುಸ್ಲಿಂಲೀಗ್‌ನ ಬಷೀರ್, ರಾಮಕೃಷ್ಣ ಕಡಂಬಾರ್, ಪಿಡಿಪಿಯ ಎಸ್.ಎಂ. ಬಷೀರ್, ರಫೀಕ್ ಸಿದ್ಧಿಕ್, ಬಷೀರ್ ಕನಿಲ ಮಾತನಾಡಿದರು. ಸಿಯಾದ್ ಸ್ವಾಗತಿಸಿದರು. ಇಂದು ಸಂಜೆ ಪ್ರವಾಸಿ ಸಂಗಮ, ಬುರ್ಧಾ ಮಜ್ಲೀಸ್ ನಡೆಯಲಿದೆ.

RELATED NEWS

You cannot copy contents of this page