ಮಂಜೇಶ್ವರ: ಮಂಜೇಶ್ವರ ಮಳ್ಹರ್ ಸಂಸ್ಥೆಗಳ ರಜತ ಜ್ಯುಬಿಲಿ ಆಚರಣೆಗಳಿಗೆ ಚಾಲನೆ ನೀಡಲಾಗಿದ್ದು, ಸಮಸ್ತ ಕೇಂದ್ರ ಮುಶಾವರ ಸದಸ್ಯ ಹಾಗೂ ಮಳ್ಹರ್ ಶಿಲ್ಪಿ ಮುಹಮ್ಮದ್ ಉಮರುಲ್ ಫಾರೂಕ್ ಅಲ್‌ಬುಖಾರಿ ತಂಙಳ್‌ರ 10ನೇ ಸಂಸ್ಮರಣೆ 22ರಂದು ಸಮಾಪ್ತಿಗೊಳ್ಳಲಿದೆ. ಇದಕ್ಕಾಗಿ ಮಂಜೇಶ್ವರ ವಲಯದ ವಿವಿಧ ಘಟಕಗಳಿಂದ ಸಂಗ್ರಹಿಸಿದ ಸಾಮಗ್ರಿ ಗಳನ್ನು ಶೋಭಾಯಾತ್ರೆ ಮೂಲಕ ಮಳ್ಹರ್‌ಗೆ ತರಲಾಯಿತು. ಕೇರಳ ಮುಸ್ಲಿಂ ಜಮಾಯತ್, ಎಸ್‌ವೈಎಸ್, ಎಸ್‌ಎಸ್‌ಎಫ್, ಎಸ್‌ಜೆಎಂ, ಎಸ್‌ಎಂಎ ಸಮಿತಿಗಳ ನೇತೃತ್ವದಲ್ಲಿ ಸಂಗ್ರಹಿಸಿದ ಸಾಮಗ್ರಿಗಳನ್ನು ಮಳ್ಹರ್ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾ ಯಿತು. ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಶಹೀರ್ ಅಲ್‌ಬುಖಾರಿ, ಪ್ರಧಾನ ಕಾರ್ಯದರ್ಶಿ ಅಹ್ಮದ್ ಜಲಾಲುದ್ದೀನ್ ಅಲ್‌ಬುಖಾರಿ ಎಂಬಿವರು ಸ್ವೀಕರಿಸಿದರು. ಅಬ್ದುಲ್ ಅಸೀಸ್ ಸಖಾಫಿ ಮಚ್ಚಂಪಾಡಿ, ಜಬ್ಬಾರ್ ಸಖಾಫಿ ಪಾತೂರು, ಸೈನುದ್ದೀನ್ ಹಾಜಿ, ಪಳ್ಳಿಕುಂಞಿ ಹಾಜಿ, ರಫೀಕ್ ಲತೀಫಿ ಮೊದಲಾದವರು ಭಾಗವಹಿಸಿದರು.
