ಮಹಾಕುಂಭ ಮೇಳದಲ್ಲಿ ಕಾಲ್ತುಳಿತ: 17 ಮಂದಿ ಸಾವಿಗೀಡಾದ ಶಂಕೆ
ಲಕ್ನೋ: ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಸಂಗಮ್ ಘಾಟ್‌ನಲ್ಲಿ ಆಯೋಜಿಸಲಾಗಿದ್ದ 144 ವರ್ಷಗಳಿ ಗೊಮ್ಮೆ ನಡೆಯುವ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾಕುಂಭಮೇಳದಲ್ಲಿ ಅಮೃತಸ್ನಾನದ ವೇಳೆ ಉಂಟಾದ ಭಕ್ತರ ಭಾರೀ ನೂಕುನುಗ್ಗಲಿನಿಂದ ಸುಮಾರು ೧೭ ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಕನಿಷ್ಠ 50 ಮಂದಿ ಗಾಯಗೊಂ ಡಿದ್ದಾರೆ. ಗಾಯಗೊಂಡವರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪವಿತ್ರ ಸ್ನಾನಕ್ಕೆ ಜನಸಂದಣಿ ಹೆಚ್ಚಿದ ಕಾರಣ ಮಹಾಕುಂಭ ಮೇಳದಲ್ಲಿ ನೂಕುನುಗ್ಗಲು ಉಂಟಾಯಿತು. ಆ ವೇಳೆ ಮುಖ್ಯ ಸಂಗಮದಲ್ಲಿ ಮಾತ್ರ ಸ್ನಾನ ಮಾಡಬೇಕೆಂದು ತಿಳಿಸಲಾಗಿದೆ. ಇದರಿಂದ ಇದ್ದಕ್ಕಿದ್ದಂತೆ ಜನಸಂದಣಿ ಹೆಚ್ಚಾಗಿರುವುದು ಕಾಲ್ತುಳಿತಕ್ಕೆ ಕಾರಣವಾಯಿತೆಂದು ಹೇಳಲಾಗುತ್ತಿದೆ. ಭಾರೀ ನೂಕುನುಗ್ಗಲು ಉಂಟಾದ ತಕ್ಷಣ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಗಾಯಗೊಂಡವ ರನ್ನು ಸೆಂಟ್ರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಮೃತಸ್ನಾನಕ್ಕಾಗಿ ಸಂಗಮ್ ಘಾಟ್‌ನಲ್ಲಿ 8ರಿಂದ 10 ಕೋಟಿ ಜನರು ಸೇರುವ ನಿರೀಕ್ಷೆ ಇದೆ. ಕಾಲ್ತುಳಿತ ಹಿನ್ನೆಲೆಯಲ್ಲಿ ಅಮೃತಸ್ನಾನ ವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸ ಲಾಗಿದೆ. ಈ ಪ್ರದೇಶದಾ ದ್ಯಂತ ಎಲ್ಲೆಡೆಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಕಾಲ್ತುಳಿತ ಬಗ್ಗೆ ಸಾಮಾಜಿಕ ಹಾಗೂ ಇತರ ಮಾಧ್ಯಮ ಗಳ ಮೂಲಕ ನಿರಾಧಾರಿತವಾದ ರೀತಿಯ ವ್ಯಾಪಕ ಪ್ರಚಾರ ನಡೆಸಲಾಗುತ್ತಿದೆ. ಅಂತಹ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನರಲ್ಲಿ ವಿನಂತಿಸಿಕೊಂಡಿದ್ದಾರೆ. ಕಾಲ್ತುಳಿತ ಘಟನೆಯ ಎಲ್ಲವನ್ನೂ ಸರಕಾರ ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಪರಿಶೀಲಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಮಾಹಿತಿ ಕೇಳಿದ ಪ್ರಧಾನಿ ಮೋದಿ, ಅಮಿತ್ ಶಾ
ಪ್ರಯಾಗ್‌ರಾಜ್‌ನಲ್ಲಿ ಉಂಟಾದ ಕಾಲ್ತುಳಿತದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಪೊಲೀಸರಲ್ಲಿ ಕರೆ ಮಾಡಿ ಪರಿಸ್ಥಿತಿಯನ್ನು ವಿಚಾರಿಸಿದರು. ಮಹಾಕುಂಭ ಮೇಳ ಇದುವರೆಗೆ ನಡೆಸದಿರುವ ಬೆಳವಣಿಗೆಗಳನ್ನು ಪರಿಶೀಲಿಸಿದ ಪ್ರಧಾನಿ, ತಕ್ಷಣದ ಕ್ರಮಗಳಿಗೆ ಸೂಚನೆ ನೀಡಿದ್ದಾರೆ.