ಮಾದಕವಸ್ತು ಕೈವಶವಿರಿಸಿದ್ದ ವ್ಯಕ್ತಿ ಸೆರೆ
ಕುಂಬಳೆ: ಮಾದಕವಸ್ತುವಾದ ಎಂಡಿಎಂಎ ಕೈವಶವಿರಿಸಿಕೊಂಡಿದ್ದ ಓರ್ವನನ್ನುಕುಂಬಳೆ ಅಬಕಾರಿ ರೇಂಜ್ ಇನ್‌ಸ್ಪೆಕ್ಟರ್ ಶ್ರಾವಣ್ ಕೆ.ವಿ ನೇತೃತ್ವದ ತಂಡ ಬಂಧಿಸಿದೆ.
ಉಪ್ಪಳ ಮಣಿಮುಂಡ ನಿವಾಸಿ ಮುಹಮ್ಮದ್ ಸಕೀರ್ (50) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಈತನ ಕೈಯಿಂದ 0.346 ಗ್ರಾಂ ಎಡಿಎಂಎ ವಶಪಡಿಸಲಾಗಿದೆ. ಮೊನ್ನೆ ಸಂಜೆ 4.30ಕ್ಕೆ ಕಂiರು ವಿಲ್ಲೇಜ್‌ನ ಕೊಕ್ಕೆಚ್ಚಾಲ್ ಜಂಕ್ಷನ್‌ಗೆ ತೆರಳುವ ರಸ್ತೆ ಬದಿ ನಿಂತಿದ್ದ ಮುಹಮ್ಮದ್ ಸಕೀರ್‌ನನ್ನು ಸಂಶಯದ ಮೇರೆಗೆ ತಪಾಸಣೆ ನಡೆಸಿದಾಗ ಮಾದಕವಸ್ತು ಪತ್ತೆಯಾಗಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಬಕಾರಿ ಪ್ರಿವೆಂಟೀವ್‌ಆಫೀಸರ್ ಮನಾಸ್ ಕೆ.ವಿ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ರಾಹುಲ್ ಇ, ಸೂರ್ಜಿತ್ ಕೆ, ಮಹಿಳಾ ಸಿವಿಲ್ ಎಕ್ಸೈಸ್ ಆಫೀಸರ್ ಹರಿಶ್ರೀ ಎನ್, ಸಿಇಒ ಚಾಲಕ ಪ್ರವೀಣ್ ಕುಮಾರ್ ಎಂಬಿವರಿದ್ದರು.