ಮುಂದುವರಿಯುತ್ತಿರುವ ಯುದ್ಧ: ಬೆಂಬಲ ನೀಡಿ ಅಮೆರಿಕಾದ ಯುದ್ಧ ಹಡಗುಗಳು ಇಸ್ರೇಲಿಗೆ

ವಾಷಿಂಗ್ಟನ್: ಪ್ಯಾಲಿಸ್ಟಿನ್‌ನ ಹಮಾಸ್ ಉಗ್ರರು ಇಸ್ರೇಲ್  ಪಟ್ಟಣಗಳ ಮೇಲೆ ಶನಿವಾರ ನಡೆಸಿದ ದಾಳಿಗೆ ಇಸ್ರೇಲ್ ಅದೇ ನಾಣ್ಯದಲ್ಲಿ ಪ್ರತ್ಯುತ್ತರ ನೀಡತೊಡಗಿದ್ದು ಇದೇ ವೇಳೆ ಇಸ್ರೇಲ್‌ಗೆ ಅಗತ್ಯದ ಮಿಲಿಟರಿ ನೆರವು ನೀಡಲು ಅಮೆರಿಕ ಮುಂದಾಗಿದೆ.

ಯುನೈಟೆಡ್ ಸ್ಟೇಟ್ಸ್‌ನ ಅನೇಕ ಮಿಲಿಟರಿ ಹಡಗುಗಳು ಮತ್ತು ವಿಮಾನಗಳನ್ನು ಇಸ್ರೇಲ್‌ಗೆ ಕಳುಹಿಸಿಕೊಡಲಾಗಿದೆ ಎಂದು ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಅಸ್ಟಿನ್ ತಿಳಿಸಿದ್ದಾರೆ.

ಇದರಲ್ಲಿ ಪಡೆವಾಹಕ, ಮಾರ್ಗದರ್ಶಿ  ಕ್ಷಿಪಣಿ ಕ್ರೂಸರ್ ಮತ್ತು ಮಾರ್ಗದರ್ಶಿ ಕ್ಷಿಪಣಿ ನಾಶಕ ನೌಕೆಗಳು ಒಳಗೊಂಡಿವೆ. ಯುಎಸ್‌ಎಯ ವಾಯುಪಡೆಯ ಎಫ್-೩೫, ಎಫ್-೧೫, ಎಫ್-೧೬, ಮತ್ತು ಎ-೧೦ ಯುದ್ಧ ವಿಮಾನಗಳನ್ನು ಇಸ್ರೇಲ್‌ಗೆ ಕಳುಹಿಸಿಕೊಡಲಾಗಿದೆ. ಇದರ ಹೊರತಾಗಿ ಇಸ್ರೇಲ್‌ಗೆ ಅಗತ್ಯದ ಇತರ ಶಸ್ತ್ರಾಸ್ತ್ರಗಳನ್ನು ಸಹ ಅಮೆರಿಕಾ ಒದಗಿಸಲಿದೆಯೆಂದು ಅಸ್ಟಿಸ್ ಹೇಳಿದ್ದಾರೆ.

ಇನ್ನೊಂದೆಡೆ ಇರಾನ್ ಸೇರಿದಂತೆ ಇತರ ಹಲವು ಮುಸ್ಲಿಂ ರಾಷ್ಟ್ರಗಳು ಪ್ಯಾಲೆಸ್ಟಿನ್‌ಗೆ ಬೆಂಬಲ  ಘೋಷಿಸಿವೆ. ಇಸ್ರೇಲ್ – ಪ್ಯಾಲೆಸ್ಟಿನ್ ನಡುವಿನ ಯುದ್ಧ ಈಗ ತೀವ್ರ ರೂಪ ಪಡೆದುಕೊಳ್ಳತೊ ಡಗಿದೆ. ಅದರಲ್ಲಿ ಇಸ್ರೇಲ್‌ನ ೭೦೦ಕ್ಕೂ ಹೆಚ್ಚು ಮಂದಿ ಹಾಗೂ ಪ್ಯಾಲೆಸ್ಟಿನ್ (ಹಮಾಸ್)ನ ೪೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಹಸ್ರಾರು ಮಂದಿ ಗಾಯಗೊಂಡಿದ್ದಾರೆ.  ಇನ್ನೊಂದೆಡೆ  ಹಮಾಸ್ ಉಗ್ರರ  ಪ್ರಧಾನ ನೆಲೆಗಳನ್ನು ಗುರಿಯಾಗಿಸಿಕೊಂಡು  ಗಾಜಾ  ಪಟ್ಟಿ ಮೇಲೆ  ಇಸ್ರೇಲ್ ಉಗ್ರ ದಾಳಿ  ಆರಂಭಿಸಿ ದೆ.  ಇಸ್ರೇಲ್‌ನಲ್ಲಿ ಸಹಸ್ರಾರು ಭಾರತೀ ಯರೂ ಸಿಲುಕಿಕೊಂಡಿದ್ದು, ಅವರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಇಸ್ರೇಲ್ ತಿಳಿಸಿದೆ.

You cannot copy contents of this page