ಮುಂಬೈಯಲ್ಲಿ ಘೋರ ಅಗ್ನಿ ದುರಂತ: ಏಳು ಮಂದಿ ಜೀವಂತ ದಹನ, ೫೧ ಮಂದಿಗೆ ಗಾಯ
ಮುಂಬೈ: ವಾಣಿಜ್ಯನಗರಿ ಮುಂಬೈಯ ಗೋರೆಗಾಂವ್ ವೆಸ್ಟ್‌ನಲ್ಲಿ ಇಂದು ಮುಂಜಾನೆ ಏಳು ಅಂತಸ್ತಿನ ವಸತಿ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಇದರಲ್ಲಿ ಕನಿಷ್ಟ ಏಳು ಮಂದಿ ಸಾವನ್ನಪ್ಪಿದ್ದಾರೆ. ೫೧ ಮಂದಿ ಸುಟ್ಟ ಗಾಯಗೊಂಡಿದ್ದು, ಇವರಲ್ಲಿ ೫ ಮಂದಿಯ ಸ್ಥಿತಿ ಚಿಂತಾಜನಕವಾಗಿದೆಯೆಂದು ವೈದ್ಯರು ತಿಳಿಸಿದ್ದಾರೆ. ಗಾಯಾಳುಗಳನ್ನು ಕೂಪರ್ ಆಸ್ಪತ್ರೆ ಮತ್ತು ಬಾಳಾಸಾಹೇಬ್ ಠಾಕ್ರೆ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಾಗಿ ದಾಖಲಿಸಲಾಗಿದೆ.
ಗೋರೆಗಾಂವ್ ಪಶ್ಚಿಮ ಆಜಾದ್ ಮೈದಾನ್‌ಬಳಿಯಿರುವ ಜೈ ಭವಾನಿ ಎಂಬಹೆಸರಿನ ಬಹುಮಹಡಿ ಕಟ್ಟಡದಲ್ಲಿ ಇಂದು ಮುಂಜಾನೆ ಸುಮಾರು ೩.೦೫ರ ವೇಳೆಗೆ ಬೆಂಕಿ ಅನಾಹುತ ಉಂಟಾಗಿದೆ. ಅದು ಬಳಿಕ ಕಟ್ಟಡದ ಇತರೆಡೆಗಳಿಗೆ ವ್ಯಾಪಿಸತೊಡಗಿದೆ. ಆ ಬಗ್ಗೆ ಲಭಿಸಿದ ಮಾಹಿತಿಯಂತೆ ಅಗ್ನಿಶಾಮಕದಳ ಆಗಮಿತಿ ಸತತ ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ಕಾರ್ಯಾಚರಣೆಯಲ್ಲಿ ಬೆಂಕಿಯನ್ನು ನಂದಿಸಲಾಯಿತು. ಬೆಂಕಿ ಕೆನ್ನಾಲಿಗೆಗಳು ಅಲ್ಲೇ ಪಕ್ಕದ ಅಂಗಡಿಗಳು ಸ್ಕ್ರಾಪ್ ವಸ್ತುಗಳು ಆ ಪರಿಸರದಲ್ಲಿ ನಿಲ್ಲಿಸಲಾದ ಹಲವು ವಾಹನಗಳಿಗೂ ತಗಲಿದೆ. ಕಟ್ಟಡಕ್ಕೆ ಬೆಂಕಿ ತಗಲಿದಾಗ ಅದರಲ್ಲಿದ್ದ ಜನರು ಪ್ರಾಣ ರಕ್ಷಣೆಗಾಗಿ ಪರದಾಡು ಸ್ಥಿತಿಯೂ ಉಂಟಾಗಿದೆ.
ಬೆಂಕಿ ಹೇಗೆ ತಗಲಿ ಕೊಂಡಿತ್ತೆಂಬುವುದರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಕೊಳೆಗೇರಿ ಪುನರ್ವಸತಿ ಯೋಜನೆಯಡಿ ೨೦೦೬ರಲ್ಲಿ ಈ ಬಹುಮಹಡಿ ಕಟ್ಟಡ ಸಮುಚ್ಛಯ ನಿರ್ಮಿಸಲಾಗಿತ್ತು. ಇದು ಅಗ್ನಿಶಾಮಕ ವ್ಯವಸ್ಥೆ ಇದ್ದಿರಲಿಲ್ಲ. ಮಾತ್ರವಲ್ಲ ಅದರ ಲಿಫ್ಟ್ ಕೂಡಾ ಹಳೆಯದಾಗಿತ್ತೆಂದು