ಮುಳಿಯಾರು ಪುನರ್ವಸತಿ ಗ್ರಾಮ ಸಜ್ಜೀಕರಣೆ ಶೀಘ್ರ-ಸಿ.ಎಂ
ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಮುಳಿಯಾರಿನಲ್ಲಿ ಸ್ಥಾಪಿಸಲಾಗಿರುವ ಮುಳಿಯಾರು ಪುನರ್ವಸತಿ ಗ್ರಾಮದ ಕಾರ್ಯಚಟು ವಟಿಕೆಗಳು ಆರಂಭಗೊಂಡರೂ ಅಲ್ಲಿ ಅಗತ್ಯದ ಸಜ್ಜೀಕರಣೆ ಇನ್ನೂ ಪೂರ್ಣ ವಾಗಿ ನಡೆದಿಲ್ಲ. ಆದ್ದರಿಂದ ಅದನ್ನು ಶೀಘ್ರ ಪೂರ್ಣಾಗಿ ಸಜ್ಜೀಕರಿಸಲಾಗು ವುದೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ದೈನಂದಿನ 30 ಮಂದಿ ಪರಿಚಾರಿಕೆ ನೀಡಲು ಇಲ್ಲಿ ಅಗತ್ಯದ ಥೆರಾಫಿಸ್ಟ್ ಗಳನ್ನು ನೇಮಿಸಲಾಗುವುದು. ಅಗತ್ಯದ ಸಿಬ್ಬಂದಿಗಳ ನೇಮಕಾತಿ ಹಾಗೂ ತರಬೇತಿ ನೀಡಲು ಅಗತ್ಯದ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಬಡ್ಸ್ ಸ್ಕೂಲ್‌ಗಳನ್ನು ಕೈಗೆತ್ತಿಕೊಂಡು ಅವುಗಳನ್ನು ಮಾದರಿ ಶಿಶು ಪುನರ್ವ ಸತಿ ಕೇಂದ್ರ (ಎಂ.ಸಿ. ಆರ್.ಸಿ)ಯಾಗಿ ಭಡ್ತಿಗೊಳಿಸಲಾ ಗುವುದು. ಆಯಾ ಪಂಚಾಯತ್‌ಗಳಲ್ಲಿ ಹಗಲು ಪರಿಚರಣಾ ಕೇಂದ್ರಗಳನ್ನು ಆರಂಭಿಸಲಾಗುವುದು. ಜನರ ಸಹಭಾಗಿತ್ವ ದೊಂದಿಗೆ ಅಗತ್ಯದ ನಿರ್ವಹಣೆಗಳನ್ನು ನಡೆಸಲಾಗುವುದು.