ಮೆಥಾಫಿಟಮಿನ್, ಗಾಂಜಾ ವಶ: ಯುವಕ ಸೆರೆ

ಕಾಸರಗೋಡು: ಪೆರ್ಲಡ್ಕದಲ್ಲಿ ಕಾಸರಗೋಡು ಎಕ್ಸೈಸ್ ಎನ್ ಪೋರ್ಸ್‌ಮೆಂಟ್ ಆಂಡ್ ಆಂಟಿ  ನರ್ಕೋಟಿಕ್ಸ್ ಸ್ಪೆಶಲ್ ಸ್ಕ್ವಾಡ್‌ನ ಹೆಚ್ಚುವರಿ ಹೊಣೆಗಾರಿಕೆ ಹೊಂದಿರುವ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ  ನೇತೃತ್ವದ ಅಬಕಾರಿ ತಂಡ ನಿನ್ನೆ ಪೆರ್ಲಡ್ಕದಲ್ಲಿ ನಡೆಸಿದ ಕಾರ್ಯಾಚರಣೆ ಯಲ್ಲಿ ೦.೦೪೫ ಗ್ರಾಂ ಮಾದಕ ವಸ್ತುವಾದ ಮೆಥಾಫಿಟಮಿನ್ ಹಾಗೂ ೧೦ ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಪೆರ್ಲಡ್ಕದ ನೌಶಾದ್ ಅಲಿ ಸಿ.ಎಚ್. (24) ಎಂಬಾತನನ್ನು ಬಂಧಿಸಿ ಎನ್‌ಡಿಪಿಎಸ್ ಪ್ರಕರಣ ದಾಖಲಿಸಲಾ ಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಮುರಳಿ ಕೆ.ವಿ., ಪ್ರಿವೆಂಟಿವ್ ಆಫೀಸರ್‌ಗಳಾದ ಪ್ರಶಾಂತ್ ಕುಮಾರ್ ವಿ, ನೌಶಾದ್ ಕೆ, ಪ್ರಜಿತ್ ಕೆ.ಆರ್, ಸಿಪಿಒಗಳಾದ ಸತೀಶನ್ ಕೆ, ಸೋನು ಸೆಬಾಸ್ಟಿನ್ ಮತ್ತು ಚಾಲಕ ಕ್ರಿಸ್ಟಿನ್ ಪಿ.ಎ. ಎಂಬವರು ಒಳಗೊಂಡಿದ್ದರು.

You cannot copy contents of this page