ಮೆಥಾಫಿಟ್‌ಮಿನ್ ಸಹಿತ ಓರ್ವ ಸೆರೆ: ಬೈಕ್ ವಶ
ಕಾಸರಗೋಡು: ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕದ್ರವ್ಯವಾದ 6.024 ಗ್ರಾಂ ಮೆಥಾಫಿಟ್‌ಮಿನ್ ಸಹಿತ ಓರ್ವ ನನ್ನು ಬಂಧಿಸಿದೆ. ನೆಕ್ರಾಜೆ ಗ್ರಾಮದ ನೆಲ್ಲಿಕಟ್ಟೆ ಪೊಡಿಪಳ್ಳ ಚೆನ್ನಡ್ಕದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿ ರುವ ಮುಹಮ್ಮದ್ ಹನೀಫಾ.ಕೆ (38) ಬಂಧಿತ ಆರೋಪಿ. ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಹೆಚ್ಚುವರಿ ಹೊಣೆಗಾರಿಕೆ ಹೊಂದಿರುವ ಕುಂಬಳೆ ಎಕ್ಸೈಸ್ ರೇಂಜ್ ಇನ್‌ಸ್ಪೆಕ್ಟರ್ ಮ್ಯಾಥ್ಯು ಕೆ.ಡಿಯವರ ನೇತೃತ್ವದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಈ ಮಾಲು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯ ಮೇಲೆ ಅಬಕಾರಿ ತಂಡ ಹಲವು ದಿನಗಳಿಂದ ತೀವ್ರ ನಿಗಾ ಇರಿಸಿತ್ತು. ಅದರಂತೆ ಆತನನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡು ಆತನನ್ನು ಕಾಸರ ಗೋಡು ಅಸಿಸ್ಟೆಂಟ್ ಎಕ್ಸೈಸ್ ಕಮಿಶ ನರ್ ಜನಾರ್ದನನ್ ಪಿ.ಪಿಯವರ ಸಾನಿಧ್ಯದಲ್ಲಿ ದೇಹ ತಪಾಸಣೆಗೊಳ ಪಡಿಸಿದಾಗ ಆತ ಧರಿಸಿದ್ದ ಟ್ರಾಕ್ ಸೂಟ್‌ನ ಜೇಬಿನಲ್ಲಿ ಪೊಲಿಥಿನ್ ಕವರ್‌ನಲ್ಲಿ ಕಟ್ಟಿದ್ದ ೪.೫೫೩ ಗ್ರಾಂ ಮೆಥಾಫಿಟ್‌ಮಿನ್ ಮಾದಕದ್ರವ್ಯ ಮಾರಾಟದ ಮೂಲಕ ಆತನಿಗೆ ಲಭಿಸಿದ್ದ 2೦,೦೦೦ ರೂ. ನಗದು, ಮೊಬೈಲ್, ಆಧಾರ್ ಕಾರ್ಡ್ ಪತ್ತೆಯಾಗಿದೆ. ನಂತರ ಆತ ಉಪಯೋಗಿಸುತ್ತಿದ್ದ ಬೈಕ್‌ನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ 1.47 ಗ್ರಾಂ ಮೆಥಾಫಿಟ್‌ಮಿನ್ ಪತ್ತೆಯಾಗಿದೆಯೆಂದು ಅಬಕಾರಿ ಅಧಿಕಾರಿ ಗಳು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ನಂತರ ನ್ಯಾಯಾಲಯದಲಿ ಹಾಜರುಪ ಡಿಸಿ ನ್ಯಾಯಾಂಗ ಬಂಧನದಲ್ಲಿರಿ ಲಾಗಿದೆ. ಈ ಅಬಕಾರಿ ಕಾರ್ಯಾ ಚರಣೆ ನಡೆಸಿದ ತಂಡದಲ್ಲಿ ಗ್ರೇಡ್ ಅಸಿಸ್ಟೆಂ ಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಗಳಾದ ಮುರಳಿ ಕೆ.ವಿ, ಸಿ.ಕೆ.ವಿ ಸುರೇಶ್, ಸಂತೋಷ್ ವಿ.ವಿ, ಗ್ರೇಡ್ ಪ್ರಿವೆಂಟೀವ್ ಆಫೀಸರ್‌ಗಳಾದ ಪ್ರಜಿತ್ ಕೆ.ಆರ್, ನೌಶಾದ್ ಕೆ, ಅಜೀಶ್ ಸಿ, ಜಿತೇಂದ್ರನ್, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಸೋನು ಸೆಬಾಸ್ಟಿಯನ್, ಸಿಜಿನ್ ಸಿ, ಅತುಲ್ ಟಿ.ವಿ. ಅಖಿಲೇಶ್ ಎಂ.ಎ, ಅಶ್ವತಿ ವಿ.ವಿ ಮತ್ತು ಚಾಲಕ ಸಜೀಶ್ ಎಂಬವರು ಒಳಗೊಂಡಿದ್ದರು.