ಮೊಮ್ಮಗುವನ್ನು ಶಾಲೆಗೆ ಕರೆದುಕೊಂಡು ಹೋದ ಮಹಿಳೆ ಅಸ್ವಸ್ಥ ಸ್ಥಿತಿಯಲ್ಲಿ ಬಸ್ ತಂಗುದಾಣದಲ್ಲಿ ಪತ್ತೆ
ಕುಂಬ್ಡಾಜೆ: ಮೊಮ್ಮಗುವನ್ನು ಶಾಲೆಗೆ ಕರೆದೊಯ್ದ ಬಳಿಕ ನಾಪತ್ತೆಯಾದ ಮಹಿಳೆಯನ್ನು ಬಸ್ ತಂಗುದಾಣದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕುಂಬ್ಡಾಜೆ, ಚಂದ್ರಂಪಾರೆ ನಿವಾಸಿಯಾದ ೫೪ರ ಹರೆಯದ ಮಹಿಳೆಯನ್ನು ಇಂದು ಮುಂಜಾನೆ ಮಲ್ಲಂಪಳ್ಳಿ ಸಮೀಪದ ಬಸ್ ತಂಗುದಾಣದಲ್ಲಿ ಪತ್ತೆಹಚ್ಚಲಾಗಿದೆ. ಇವರನ್ನು ಆಸ್ಪತ್ರೆಯಲ್ಲಿ ದಾಖ ಲಿಸಲಾಗಿದೆ.
ಕಳೆದ ಎರಡು ವಾರಗಳಿಂದ ಈ ಮಹಿಳೆ ಅಮ್ಮಂಗೋಡಿನ ಪುತ್ರಿಯ ಮನೆಯಲ್ಲಿ ವಾಸವಾಗಿದ್ದರು. ನಿನ್ನೆ ಬೆಳಿಗ್ಗೆ ಪುತ್ರಿಯ ಮಗುವನ್ನು ಪೊವ್ವಲ್ ಶಾಲೆಗೆ ಕರೆದುಕೊಂಡು ಹೋಗಿದ್ದರು. ಆ ಬಳಿಕ ಇವರು ಹಿಂತಿರುಗಿರಲಿಲ್ಲ. ಸಂಜೆವರೆಗೂ ಹುಡುಕಾಡಿ ಪತ್ತೆಹಚ್ಚಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆದೂರು ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿರುವ ಮಧ್ಯೆ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಇವರು ಚೇತರಿಸಿಕೊಂಡ ಬಳಿಕ ಹೇಳಿಕೆ ದಾಖಲಿಸಿ ಘಟನೆಗೆ ಕಾರಣವೇ ನೆಂದು ಕಂಡುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.