ಮುಳ್ಳೇರಿಯ: ಸಾಮಾಜಿಕ, ರಾಜಕೀಯ, ಸಹಕಾರಿ ಹಾಗೂ ಕಲಾರಂಗದಲ್ಲಿ ಸಕ್ರಿಯರಾಗಿದ್ದ ಶಾಂತಿನಗರ ಬಳಿಯ ಕರಣಿ ನಿವಾಸಿ ಎ ಗೋಪಾಲನ್ ನಾಯರ್ (ಎ.ಜಿನಾಯರ್ (76) ನಿನ್ನೆ ನಿಧನ ಹೊಂದಿದರು. ಯಕ್ಷಗಾನ ಕಲಾವಿದರಾಗಿದ್ದ ಇವರು 100ಕ್ಕೂ ಹೆಚ್ಚು ಕನ್ನಡ ಯಕ್ಷಗಾನ ಕಥಾ ಭಾಗವನ್ನು ಮಲೆಯಾಳಕ್ಕೆ ಅನುವಾದ ಮಾಡಿದ್ದಾರೆ. ಕೇರಳ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಇವರಿಗೆ ಲಭಿಸಿತ್ತು. ಕಾಂಗ್ರೆಸ್ ಮಂಡಲ ಅಧ್ಯಕ್ಷ ಜಿಲ್ಲಾ ಸಮಿತಿ ಸದಸ್ಯರಾಗಿಯೂ ದುಡಿದಿದ್ದರು.
ಮೃತರು ಪತ್ನಿ, ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






