ಯುವಕನ ನಿಗೂಢ ಸಾವು: ಪೊಲೀಸರಿಂದ ತನಿಖೆ

ಉಪ್ಪಳ: ಮುಳಿಗದ್ದೆ ತಾಲ್ತಾಜೆ ಕೊರಗ ಕಾಲನಿಯ ಮತ್ತಾಡಿ ಎಂಬವರ ಪುತ್ರ ಗೋಪಾಲ (೨೮)ರ ಸಾವಿಗೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಬಳಿಕವೇ ಸಾವಿಗೆ   ಕಾರಣವೇನೆಂದು ತಿಳಿಯಬ ಹುದೆಂದು  ಪೊಲೀಸರು ತಿಳಿಸಿದ್ದಾರೆ.

ಕಳೆದ ಮಂಗಳವಾರದಿಂದ ಗೋಪಾಲ ನಾಪತ್ತೆಯಾಗಿದ್ದರು. ಹುಡುಕಾಟ ವೇಳೆ ಬುಧವಾರರಾತ್ರಿ ಪೆರುವೋಡಿ ಕುಡಾನ ಎಂಬಲ್ಲಿನ ಕಾಡು ಪೊದೆಗಳು ತುಂಬಿರುವ ಹಿತ್ತಿಲಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಮನೆ ಹಿತ್ತಿಲಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

RELATED NEWS

You cannot copy contents of this page