ಯುವಕ ಕುಸಿದುಬಿದ್ದು ಮೃತ್ಯು

ಕುಂಬಳೆ: ಯುವಕನೋರ್ವ ಕುಸಿದುಬಿದ್ದು ಮೃತಪಟ್ಟರು. ಸೂರಂಬೈಲು ನಿವಾಸಿ ಯಶ್ವಂತ್ ಶೆಟ್ಟಿ (45) ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ ಇವರು ಮನೆಯಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿ ಸಿದರೂ ಜೀವ ರಕ್ಷಿಸಲಾಗಲಿಲ್ಲ.

ದಿ| ವಿಠಲ ಶೆಟ್ಟಿ-ಗೀತಾ ಶೆಟ್ಟಿ ದಂಪತಿಯ ಪುತ್ರನಾದ ಮೃತರು ಪತ್ನಿ  ಮೈನ, ಮಕ್ಕಳಾದ ಮನ್ವಿತ್, ಮೌಲ್ಯ, ಸಹೋದರ-ಸಹೋದರಿಯರಾದ ಸುರೇಶ್ ಶೆಟ್ಟಿ, ಬೇಬಿ, ರೇವತಿ, ಶೋಭಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page