ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಸೆಂಟ್ರಿಂಗ್ ಕಾರ್ಮಿಕನಾದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ನೆಕ್ರಾಜೆ ಬಳಿಯ ಕೋಂಬ್ರಾಜೆ ನಿವಾಸಿ ಲೋರೆನ್ಸ್ ಕ್ರಾಸ್ತಾ (40) ಮೃತಪಟ್ಟ ವ್ಯಕ್ತಿ. ಇವರು ನಿನ್ನೆ ರಾತ್ರಿ ಬೆಡ್‌ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಮನೆಯವರು ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಜೋಕಿ ಕ್ರಾಸ್ತಾ- ಲೂಸಿ ಡಿಸೋಜಾ ದಂಪತಿಯ ಪುತ್ರನಾದ ಮೃತರು ಪತ್ನಿ ಸ್ಮಿತಾ ಡಿಸೋಜಾ, ಮಕ್ಕಳಾದ ನಿಶಾ ಕ್ರಾಸ್ತ, ಶೋನ್ ಕ್ರಾಸ್ತ, ಸಹೋದರ- ಸಹೋದರಿಯರಾದ ತಿಮೋತಿ ಕ್ರಾಸ್ತ, ಸನಿಲ್ ಕ್ರಾಸ್ತ, ರೀತಾ ಕ್ರಾಸ್ತ, ಪೌಲಿನ್ ಕ್ರಾಸ್ತ, ಲಿಲ್ಲಿ ಕ್ರಾಸ್ತ, ತೆರೋನಿ ಕ್ರಾಸ್ತ, ಲವೀನ ಕ್ರಾಸ್ತ, ಸಿಸ್ಟರ್ ಹೈನೆಟ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page