ಯುವ ವ್ಯಾಪಾರಿ ಅಸೌಖ್ಯದಿಂದ ನಿಧನ
ಕಾಸರಗೋಡು: ತಾಳಿಪಡ್ಪು ವಳಪ್ಪಿಲ್ ವೀಡ್ ನಿವಾಸಿ ದಿ| ಶಿವ ಎಂಬವರ ಪುತ್ರ ಕಿರಣ್ ಕುಮಾರ್ (೪೬) ಅಸೌಖ್ಯದಿಂದ ನಿಧನಹೊಂದಿದರು. ಇವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಈ ಹಿಂದೆ ಬಿ.ಎಂ.ಎಸ್ ಕಾರ್ಯಕರ್ತನಾಗಿದ್ದ ಇವರು ವ್ಯಾಪಾರಿಯೂ ಆಗಿದ್ದರು.
ಮೃತರು ತಾಯಿ ಬೇಬಿ, ಪತ್ನಿ ಸ್ವಾತಿ, ಮಕ್ಕಳಾದ ತನ್ವಿ, ಇಶಾನ್ವಿ, ಸಹೋದರರಾದ ಭಾಗ್ಯರಾಜ್, ದಿವಾಕರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.