ರಸ್ತೆಗೆ ಮರ ಬಿದ್ದು ಬಸ್ ಸಂಚಾರ ಮೊಟಕು

ಉಪ್ಪಳ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಚಿಪ್ಪಾರು ಕಡೆಂಕೋ ಡಿಯಲ್ಲಿ ರಸ್ತೆಗೆ ಮರ ಮುರಿದು ಬಿದ್ದು ಬಸ್ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇಂದು ಬೆಳಿಗ್ಗೆ ರಸ್ತೆ ಬದಿಯ ಮರ ತುಂಡಾಗಿ ವಿದ್ಯುತ್ ತಂತಿ ಮೇಲೆ  ಸಿಲುಕಿ ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಇದರಿಂದ ಉಪ್ಪಳ-ಲಾಲ್‌ಬಾಗ್-ಕುರುಡಪದವು ರೂಟ್‌ನಲ್ಲಿ ಬಸ್ ಸಂಚಾರ ಮೊಟಕುಗೊಂಡಿದೆ. ಸಣ್ಣ ವಾಹನಗಳು ಸಂಚರಿಸುತ್ತಿವೆ.

ಮರ ವಿದ್ಯುತ್ ತಂತಿಯಲ್ಲಿ ಸಿಲುಕಿಕೊಂಡಿರುವುದರಿಂದ ಅದನ್ನು ತರೆವುಗೊಳಿಸಲು ವಿಳಂಬವಾಗಿದೆ. ವಿದ್ಯುತ್ ಕಚೇರಿಯಿಂದ ನೌಕರರು ತಲುಪಿ ಮರವನ್ನು ತೆರವುಗೊಳಿಸಿದ ಬಳಿಕವೇ ಬಸ್ ಸಂಚಾರ ಪುನರಾರಂಭಗೊಳ್ಳಲಿದೆ.

You cannot copy contents of this page