ರಾಗಂ ಜಂಕ್ಷನ್‌ನಲ್ಲಿ ಹೆದ್ದಾರಿ ದಾಟಲು ವ್ಯವಸ್ಥೆ ಇಲ್ಲ: ಸ್ಥಳೀಯರಿಂದ ಕಾಮಗಾರಿಗೆ ತಡೆ

ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನ್‌ನಲ್ಲಿ ಹೆದ್ದಾರಿಯನ್ನು ಅಡ್ಡ ದಾಟಲು ದಾರಿ ಇಲ್ಲವೆಂದು ಆರೋಪಿಸಿ ಸ್ಥಳೀಯರು ಕಾಮಗಾರಿಗೆ ತಡೆಯೊಡ್ಡಿದ ಘಟನೆ ನಡೆದಿದೆ. ಹೆದ್ದಾರಿ ಕಾಮಗಾರಿ ವೇಳೆ ಇಲ್ಲಿ ಪಾದಚಾರಿಗಳಿಗೆ ಸಂಚರಿಸಲೆಂದು ಬಿಟ್ಟಿದ್ದ ಸ್ಥಳದಲ್ಲೂ ಬಾರಿಕೇಡ್ ಇರಿಸಿ ಮುಚ್ಚಿರುವುದೇ ಸ್ಥಳೀಯರ ರೋಷಕ್ಕೆ ಕಾರಣವಾಗಿರುವುದು. ಆಟೋಚಾ ಲಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಪದಾಧಿಕಾರಿಗಳು ಸೇರಿ ಸ್ಥಳೀಯರಿಗೆ ಹೆದ್ದಾರಿ ದಾಟಲು ಸೂಕ್ತ ವ್ಯವಸ್ಥೆ ಕಲ್ಪಿಸದೆ ಇದ್ದ ದಾರಿ ಯನ್ನು ಮುಚ್ಚಲು  ಬಿಡುವುದಿಲ್ಲವೆಂ ದು ಕಾಮಗಾರಿಗೆ ತಡೆಯೊಡ್ಡಿದ್ದಾರೆ.

ಇಲ್ಲಿನವರಿಗೆ ರಸ್ತೆಯ ಇಕ್ಕಡೆ ಗಳಿಂದ ಅತ್ತಿತ್ತ ಸಂಚರಿಸಲು  ವ್ಯವಸ್ಥೆ ಮಾಡಿಕೊಡದಿದ್ದರೆ ಬೃಹತ್ ಹೋ ರಾಟ ನಡೆಸಲು ತೀರ್ಮಾನಿಸಿರು ವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ. ಜನಪ್ರತಿನಿಧಿಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page