ತಿರುವನಂತಪುರ: ರಾಜ್ಯದಲ್ಲಿ ಹಾಲಿನ ಬೆಲೆ ಹೆಚ್ಚಿಸಲು ಸಾಧ್ಯತೆ ಇದೆ ಎಂದು ಮೃಗಸಂರಕ್ಷಣೆ ಕ್ಷೀರೋತ್ಪಾದಕ ಸಚಿವೆ ಚಿಂಜುರಾಣಿ ತಿಳಿಸಿದ್ದಾರೆ. ಮಿಲ್ಮಾ ಹಾಗೂ ಕೃಷಿಕರ ಮಧ್ಯೆ ನಡೆಯುವ ಚರ್ಚೆಯ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ಮೊದಲು ಲೀಟರ್ ಒಂದಕ್ಕೆ 10 ರೂ.ನಂತೆ ಹೆಚ್ಚಿಸಬೇಕೆಂದು ಮಿಲ್ಮಾ ತಿರುವನಂತಪುರ ವಲಯ ಘಟಕ ಆಡಳಿತ ಸಮಿತಿ ಸಭೆ ಶಿಫಾರಸ್ಸು ಮಾಡಿತ್ತು. ಎರ್ನಾಕುಳಂ, ಮಲಬಾರ್ ಘಟಕಗಳು ಬೆಲೆ ಹೆಚ್ಚಿಸಬೇಕೆಂಬ ಬೇಡಿಕೆಯೊಡ್ಡಿತ್ತು. ಉತ್ಪಾದನೆ ವೆಚ್ಚ ಹೆಚ್ಚಳದ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಿಸಲು ಘಟಕಗಳು ಸೂಚನೆ ನೀಡಿತ್ತು. ಈ ಮೊದಲು 2022 ದಶಂಬರ್‌ನಲ್ಲಿ ರಾಜ್ಯದಲ್ಲಿ ಹಾಲಿನ ದರ ಹೆಚ್ಚಿಸಲಾಗಿತ್ತು.
