ರಾಜ್ಯಪಾಲರ ಮೇಲೆ ಹಲ್ಲೆಗೆತ್ನ: ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ: ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್‌ರನ್ನು ಇತ್ತೀಚೆಗೆ ಎಸ್‌ಎಫ್‌ಐ ಕಾರ್ಯಕರ್ತರು ತಡೆದು ಹಲ್ಲೆಗೆ ಯತ್ನಿಸಿದ ಘಟನೆಯನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಕೇರಳದಲ್ಲಿ ಶಾಂತಿ ಸುವ್ಯವಸ್ಥೆ ಪೂರ್ಣವಾಗಿ ಹದಗೆಟ್ಟಿದೆ ಎಂದು ಅಂದಾಜಿಸಿರುವ ಕೇಂದ್ರ ಗೃಹಖಾತೆ, ಈ ಕುರಿತಾಗಿ ಕೇಂದ್ರ ಸೇವೆಯಲ್ಲಿ ರುವ ಉನ್ನತಾಧಿಕಾರಿಗಳಿಗೆ ಕಠಿಣ ತಾಕೀತು ನೀಡುವ ಸಾಧ್ಯತೆ ಇದೆಯೆಂದೂ ಹೇಳಲಾಗುತ್ತಿದೆ. ಇಝೆಡ್ ಪ್ಲಸ್ ಭದ್ರತೆಯುಳ್ಳ ರಾಜ್ಯಪಾಲರ ವಿರುದ್ಧ ಪದೇ ಪದೇ ನಡೆಯುತ್ತಿರುವ ಪ್ರತಿಭಟನೆ, ಹಲ್ಲೆ ಯತ್ನದಂತಹ ಘಟನೆಯನ್ನು ಕ್ಷುಲ್ಲಕವಾಗಿ ಕಂಡರೆ ಸಂಬಂಧ ಪಟ್ಟವರ ವಿರುದ್ಧ ಕಠಿಣ ಕ್ರಮ ಉಂಟಾಗಬಹುದೆಂಬ ಸೂಚನೆಯೂ ರಾಜ್ಯ ಡಿಜಿಪಿ ಹಾಗೂ ಮುಖ್ಯ ಕರ್ಯದರ್ಶಿಗೆ ಲಭಿಸಿದೆ ಎನ್ನಲಾಗುತ್ತಿದೆ. ರಾಜ್ಯಪಾಲ ಆರಿಫ್ ಮುಹ ಮ್ಮದ್ ಖಾನ್ ವಿರುದ್ಧ ತಿರುವನಂತ ಪುರದಲ್ಲಿ ನಡೆದ ಹಲ್ಲೆಯತ್ನ ಯೋಜನಾಬದ್ದವಾ ಗಿದೆಯೆಂದೂ ಅದರಲ್ಲಿ ಪೊಲೀಸ್ ಅಧಿಕಾರಿಗಳೂ ಶಾಮೀಲಾಗಿ ದ್ದಾರೆಂದು ಇಂಟೆಲಿ ಜೆನ್ಸ್ ವರದಿಯನ್ನು ಐ.ಬಿ. ಕೇಂದ್ರ ಗೃಹ ಸಚಿವಾಲಯಕ್ಕೆ ಹಸ್ತಾಂತರಿ ಸಿದೆ. ಓರ್ವ ಪೊಲೀಸಧಿ ಕಾರಿ ಸೂಚನೆ ನೀಡಿರುವು ದಾಗಿಯೂ ಐ.ಬಿ. ವರದಿಯಲ್ಲಿ ತಿಳಿಸಲಾಗಿದೆ.