ರಾಜ್ಯಸಭೆಯಲ್ಲಿ ಮತ್ತೆ 100 ಸದಸ್ಯರ ಬಲ ದಾಟಿದ ಬಿಜೆಪಿ

ನವದೆಹಲಿ: ಉಪರಾಷ್ಟ್ರಪತಿ ಸ್ಥಾನಕ್ಕೆ ಸೆ. 9ರಂದು ಚುನಾವಣೆ ನಡೆಯಲಿರು ವಂತೆಯೇ ರಾಜ್ಯಸಭೆಯಲ್ಲಿ ಬಿಜೆಪಿಯ ಸದಸ್ಯರ ಬಲ ಮತ್ತೆ 100 ದಾಟಿದೆ.
ರಾಜ್ಯಸಭೆಯಲ್ಲಿ ಬಿಜೆಪಿಸದಸ್ಯರ ಬಲ 100ರ ಗಡಿ ದಾಟುತ್ತಿರುವುದು 2022ರ ನಂತರ ಇದೇ ಮೊದಲ ಬಾರಿಯಾಗಿದೆ. ಕೇರಳದಿಂದ ಸಿ. ಸದಾನಂದನ್ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶಗೊಂಡು ಅವರು ಪ್ರಮಾಣವಚನ ಸ್ವೀಕರಸುವ ಮೂಲಕ ಬಿಜೆಪಿಯ ಸದಸ್ಯರ ಸಂಖ್ಯೆ ಈಗ 102ಕ್ಕೇರಿದೆ. 2022ರಲ್ಲಿ 13 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆದ ಬಳಿಕ ರಾಜ್ಯ ಸಭೆಯಲ್ಲಿ ಬಿಜೆಪಿಯ ಸಂಖ್ಯಾ ಬಲ 97ರಿಂದ 101ಕ್ಕೇರಿತ್ತು. ಅನಂತರ ಬಿಜೆಪಿಯ ರಾಜ್ಯಸಭಾ ಸಂಖ್ಯಾ ಬಲ 99ಕ್ಕೆ ಕುಸಿದಿತ್ತು. ಅದಾದ ಬಳಿಕ ಹೊಸದಾಗಿ ನಾಮನಿರ್ದೇಶಗೈಯ್ಯಲಾದ ಸದಸ್ಯರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವನ ಗೈಯ್ಯುವ ಮೂಲಕ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯಾಬಲ ಈಗ 102ಕ್ಕೇರಿದೆ. ಆ ಮೂಲಕ ರಾಜ್ಯಸಭೆ ಯಲ್ಲಿ ಸದಸ್ಯರ ಬಲ 100 ದಾಟಿದ ಭಾರತದ ಎರಡನೇ ರಾಜಕೀಯ ಪಕ್ಷವಾಗಿ ಬಿಜೆಪಿ ಹೊರ ಹೊಮ್ಮಿದೆ. 1988-90ನೇ ಅವಧಿ ಯಲ್ಲಿ ರಾಜ್ಯ ಸಭೆಯ ಇತಿಹಾಸದಲ್ಲಿ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯರ ಬಲ 100ರ ಗಡಿ ದಾಟಿತ್ತು. ಅನಂತರ ಆ ಗಡಿ ದಾಟಿದ ಎರಡನೇ ರಾಜಕೀಯ ಪಕ್ಷವೆಂಬ ಕೀರ್ತಿ ಈಗ ಬಿಜೆಪಿಗೆ ಸಂದಿದೆ.
12 ನಾಮನಿರ್ದೇಶಿತ ಸದ ಸ್ಯರೂ ಸೇರಿ ರಾಜ್ಯಸಭೆ ಒಟ್ಟು 240 ಸದಸ್ಯರ ಬಲ ಹೊಂದಿದೆ. ಇದರಲ್ಲಿ ಐದು ಸ್ಥಾನಗಳು ಈಗ ತೆರವು ಬಿದ್ದಿವೆ. ಬಿಜೆಪಿ ನೇತೃತ್ವದ ಎನ್ಡಿಎ ರಾಜ್ಯ ಸಭೆಯಲ್ಲಿ ಈಗ ಒಟ್ಟು 134 ಸದಸ್ಯರ ಬಲ ಹೊಂದಿದೆ.

Leave a Reply

Your email address will not be published. Required fields are marked *

You cannot copy content of this page