ರಾಮ ಮಂದಿರ ಮೇಲೆ ಪಾಕ್ ಭಯೋತ್ಪಾದಕರ ದಾಳಿಗೆ ಸಂಚು: ಅಯೋಧ್ಯೆಯಲ್ಲಿ ಬಿಗಿ ಭದ್ರತೆ
ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ ಅಗತ್ಯದ ಪೂರ್ವ ತಯಾರಿಗಳು ನಡೆಯುತ್ತಿವೆ. ಅಕ್ಷತಪೂಜೆ ಈಗಾಗಲೇ ನೆರವೇರಿ ಸಲಾಗಿದೆ. ಅಂತಿಮ ಹಂತದ ಕಾಮಗಾರಿಗಳು ಈಗ ನಡೆಯುತ್ತಿವೆ. ಜನವರಿಯಿಂದ ಪೂಜಾ ಕೈಂಕರ್ಯ ಗಳನ್ನು ಆರಂಭಿಸಲಾಗಿದೆ. ಜನವರಿ ೨೨ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ರೀರಾಮ ಮಂದಿರವನ್ನು ಉದ್ಘಾಟಿಸಲಿರುವರು.
ಶ್ರೀರಾಮ ಮಂದಿರದ ಉದ್ಘಾಟನೆಗೆ ಇನ್ನೇನು ಎರಡು ತಿಂಗಳು ಬಾಕಿ ಇರುವಂತೆಯೇ ಈ ಮಧ್ಯೆ ಆತಂಕದ ಮಾಹಿತಿಯೊಂದು ಹೊರಬಿದ್ದಿದೆ. ಪಾಕಿಸ್ತಾನದ ಅಲ್ ಖೈದಾ ಹಾಗೂ ಲಷ್ಕರ್ ಇ ತೊಯ್ಬಾ ಭಯೋತ್ಪಾದಕ ಸಂಘ ಟನೆಗಳು ಶ್ರೀರಾಮ ಮಂದಿರದ ಮೇಲೆ ಉಗ್ರದಾಳಿಗೆ ಸಂಚು ರೂಪು ನೀಡಿರುವ ಮಾಹಿತಿ ಬಹಿರಂಗಗೊಂ ಡಿದೆ. ಕೇಂದ್ರ ಗುಪ್ತಚರ ಇಲಾಖೆ ಇದನ್ನು ಬಹಿರಂಗಪಡಿಸಿದೆ.
ರಾಮಮಂದಿರದ ಮೇಲೆ ಭಯೋತ್ಪಾದಕ ದಾಳಿ ರೂಪಿಸುವ ಮೂಲಕ ಕಾಶ್ಮೀರದ ರೀತಿ ಅಯೋಧ್ಯೆಯನ್ನು ವಿವಾದಿತ ಭೂಮಿಯಾಗಿ ಪರಿವರ್ತಿಸುವುದು ಹಾಗೂ ಅಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರ ತಲೆಯೆತ್ತಿ ನಿಲ್ಲದಂತೆ ಮಾಡುವ ಹುನ್ನಾರಕ್ಕೆ ಪಾಕಿಸ್ತಾನದ ಎರಡು ಉಗ್ರಗಾಮಿ ಸಂಘಟನೆಗಳು ರೂಪು ನೀಡಿದೆ. ಅದಕ್ಕಾಗಿ ಉಗ್ರಗಾಮಿ ಸಂಘಟನೆಗಳು ಈಗಾಗಲೇ ಮಹತ್ವದ ಚರ್ಚೆ ನಡೆಸಿ ದಾಳಿಗೆ ಸಜ್ಜಾಗಿರುವ ಮಾಹಿತಿ ಯನ್ನೂ ಗುಪ್ತಚರ ವಿಭಾಗ ಬಹಿರಂಗಪಡಿಸಿದೆ.
ಭಯೋತ್ಪಾದಕ ದಾಳಿ ಮಾಹಿತಿ ಲಭಿಸಿರುವಂತೆಯೇ ಉತ್ತರಪ್ರದೇಶ ಸರಕಾರ ಎಲ್ಲೆಡೆಗಳಲ್ಲಿ ಭದ್ರತೆ ಹೆಚ್ಚಿಸಿದೆ. ಮಾತ್ರವಲ್ಲ ಅಯೋಧ್ಯೆಯಲ್ಲಿ ಹೆಚ್ಚುವರಿ ಭದ್ರತಾ ಪಡೆ ನಿಯೋಜಿಸಲಾಗಿದೆ. ಇದರಂತೆ ಉತ್ತರ ಪ್ರದೇಶಕ್ಕೆ ಆಗಮಿಸುವ ಎಲ್ಲಾ ವಾಹನಗಳು, ಹೋಟೆಲ್‌ಗಳು ಸೇರಿದಂತೆ ಎಲ್ಲೆಡೆಗಳಲ್ಲಿ ಪೊಲೀಸರು ಬಿಗಿ ತಪಾಸಣೆ ಆರಂಭಿಸಿದ್ದಾರೆ.
ಈ ಬಗ್ಗೆ ಕೇಂದ್ರ ಸರಕಾರವೂ ಉತ್ತರಪ್ರದೇಶ ಸರಕಾರದ ಜತೆ ಮಾತುಕತೆ ನಡೆಸಿದೆ. ಭದ್ರತೆ ಇನ್ನಷ್ಟು ಹೆಚ್ಚಿಸುವಂತೆ ಕೇಂದ್ರ ನಿರ್ದೇಶ ನೀಡಿದೆ. ಮಾತ್ರವಲ್ಲ ದೇಶದ ಎಲ್ಲಾ ಗಡಿಪ್ರದೇಶಗಳಲ್ಲೂ ತೀವ್ರ ನಿಗಾ ಇರಿಸಲಾಗಿದೆ. ದೆಹಲಿ, ಮುಂಬೈ ಸೇರಿದಂತೆ ಪ್ರಮುಖ ನಗರದಲ್ಲೂ ಹದ್ದಿನ ಕಣ್ಣಿಡಲಾಗಿದೆ. ಕೋಸ್ಟಲ್ ಗಾರ್ಡ್ ಕೂಡಾ ಸನ್ನದ್ದವಾಗಿದ್ದು, ಸಮುದ್ರದ ಮೂಲಕ ಉಗ್ರರ ನುಸುಳುವಿಕೆ ತಡೆಗಟ್ಟಲು ಅಗತ್ಯದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.