ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ: ಜಿಲ್ಲೆಗೆ ಹೆಮ್ಮೆ ತಂದ ಎರಡು ಪ್ರಶಸ್ತಿಗಳು

ಕಾಸರಗೋಡು: ೬೯ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಿಸಿದಾಗ ಕನ್ನಡಕ್ಕೆ ಲಭಿಸಿದ ಮಾನ್ಯತೆಯಿಂದ ಜಿಲ್ಲೆಗೂ ಹೆಮ್ಮೆ ಉಂಟಾಗಿದೆ. ರಕ್ಷಿತ್ ಶೆಟ್ಟಿ ನಟಿಸಿದ ‘ಚಾರ್ಲಿ ೭೭೭’ ಸಿನಿಮಾಕ್ಕೆ ಅತ್ಯುತ್ತಮ ಕನ್ನಡ ಪೀಚರ್ ಫಿಲ್ಮಿ ಗೌರವ ಲಭಿಸಿ ದಾಗ ಅದನ್ನು ನಿರ್ದೇ ಶಿಸಿದ ಕಿರಣ್‌ರಾಜ್ ಕಾಸರಗೋಡಿನವರು ಎಂಬುದು ಜಿಲ್ಲೆಯ ವರಿಗೆ ಅಭಿಮಾನ ಮೂಡಿಸಿದೆ. ಇದೇ ವೇಳೆ ಸ್ಪೆಷಲ್ ಜ್ಯೂರಿ ಅವಾರ್ಡ್ ಬಾಡೂರು ನಿವಾಸಿ ಬಾ.ನಾ. ಸುಬ್ರಹ್ಮಣ್ಯರಿಗೆ ಲಭಿಸಿದೆ. ಈ ಎರಡು ಪ್ರಶಸ್ತಿಗಳಿಂದಾಗಿ ದೇಶೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಜಿಲ್ಲೆಯೂ ಸ್ಥಾನ ಪಡೆಯಿತು. ಕನ್ನಡಾಭಿಮಾನಿಗಳಿಗೆ ಓಣಂ ಹಬ್ಬದ ಸಂತಸ ಇಮ್ಮಡಿಗೊಳಿಸಿದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page