ರೇಶನ್ ಕಾರ್ಡ್ ಮಸ್ಟರಿಂಗ್ ಎಪ್ರಿಲ್ 30ರ ತನಕ ವಿಸ್ತರಣೆ
ತಿರುವನಂತಪುರ: ಆದ್ಯತಾ ವಿಭಾಗದ ರೇಶನ್ ಕಾರ್ಡುದಾರರ ಸದಸ್ಯರ ಮಸ್ಟರಿಂಗ್ ನಡೆಸಲಿರುವ ಅಂತಿಮ ದಿನಾಂಕವನ್ನು ಎಪ್ರಿಲ್ 30 ತನಕ ವಿಸ್ತರಿಸಲಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕಾ ಪೂರೈಕೆ ಖಾತೆ ಸಚಿವ ಜಿ.ಆರ್. ಅನಿಲ್ ತಿಳಿಸಿದ್ದಾರೆ..
ಮಾಸ್ಟರಿಂಗ್ ಸಮಯವನ್ನು ವಿಸ್ತರಿಸುವಂತೆ ಸಚಿವ ಅನಿಲ್ ಕೇಂದ್ರ ಆಹಾರ ಖಾತೆ ಸಚಿವ ಪ್ರಹಲ್ಲಾದ್ ಜೋಷಿಯವನ್ನು ದಿಲ್ಲಿಯಲ್ಲಿ ಭೇಟಿಯಾಗಿ ವಿನಂತಿಸಿಕೊಂಡಿದ್ದರು. ಅದಕ್ಕೆ ಕೇಂದ್ರ ಸಚಿವ ಅನುಮತಿ ನೀಡಿದ್ದಾರೆ. ಮಸ್ಟರಿಂಗ್ ನಡೆಸಲು 2024 ಡಿಸೆಂಬರ್ 30ರ ತನಕ ಕೇಂದ್ರ ಸರಕಾರ ಸಮಯವಕಾಶ ನೀಡಿತ್ತು. ಕೇರಳದಲ್ಲಿ ಈ ತನಕ ಶೇ. ೯೪ರಷ್ಟು ಮಂದಿ ಮಾತ್ರವೇ ಈ ತನಕ ಮಸ್ಟರಿಂಗ್ ನಡೆಸಿದೆ. ಆಹಾರ ಧ್ಯಾನದ ಬದಲು ರೇಶನ್ ಮಾಲಕರಿಗೆ ಆಹಾರ ಸಹ ನೀಡುವ ಕೇಂದ್ರ ಸರಕಾರದ ತೀರ್ಮಾವನ್ನು ಕೇರಳದಲ್ಲಿ ಜ್ಯಾರಿಗೊಳಿಸಲಾಗುವುದಿಲ್ಲವೆಂಬ ಭರವಸೆಯನ್ನು ಕೇಂದ್ರ ಸಚಿವ ನೀಡಿದ್ದಾರೆಂದು ಅನಿಲ್ ತಿಳಿಸಿದ್ದಾರೆ.