ರೈಲು ಹಳಿಯಲ್ಲಿ ಕಲ್ಲು, ಕ್ಲೋಸೆಟ್ ತುಂಡುಗಳನ್ನಿರಿಸಿ ಬುಡಮೇಲು ಕೃತ್ಯಕ್ಕೆ ಯತ್ನ: ಸಮಗ್ರ ತನಿಖೆ ಆರಂಭ

ಕಾಸರಗೋಡು: ಕಳನಾಡು ರೈಲು ಸುರಂಗದ ಬಳಿ ರೈಲು ಹಳಿಯಲ್ಲಿ ಕಲ್ಲು ಮತ್ತು ಕ್ಲೋಸೆಟ್‌ಗಳ ತುಂಡುಗಳನ್ನು ಇರಿಸಿ ದುಷ್ಕರ್ಮಿಗಳು ಬುಡಮೇಲು ಕೃತ್ಯಕ್ಕೆ ಯತ್ನಿಸಿದ್ದಾರೆ.

ನಿನ್ನೆ ಅಪರಾಹ್ನ ಕೊಯಂಬ ತ್ತೂರು-ಮಂಗಳೂರು ಇಂಟರ್ ಸಿಟಿ ರೈಲು ಕಾಸರಗೋಡಿಗೆ ಆಗಮಿಸುತ್ತಿದ್ದ ವೇಳೆಯಲ್ಲಿ ಈ ದುಷ್ಕೃತ್ಯವೆಸಗಲಾಗಿದೆ. ರೈಲು ಮುಂದಕ್ಕೆ ಸಾಗುವಾಗ ಅದರ  ರಭಸಕ್ಕೆ ಹಳಿಯಲ್ಲಿ ಇರಿಸಲಾಗಿದ್ದ ಕಲ್ಲುಗಳು ಮತ್ತು ಕ್ಲೋಸೆಟ್ ತುಂಡುಗಳು ಅತ್ತಿತ್ತ ಚದುರಿ ಬಿದ್ದಿದೆ.  ಇದರಿಂದಾಗಿ ಸಂಭಾವ್ಯ ಭಾರೀ ದುರಂತ ಅದೃಷ್ಟವಶಾತ್ ತಪ್ಪಿಹೋಗುವಂತಾ ಯಿತು. ವಿಷಯ ತಿಳಿದ ಕಾಸರಗೋಡು ರೈಲ್ವೇ ಪೊಲೀಸರು,  ರೈಲ್ವೇ ಭದ್ರತಾ ಪಡೆಯ ಅಧಿಕಾರಿಗಳು ಬೇಕಲ  ಪೊಲೀಸರು ತಕ್ಷಣ ಸಂಭವ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮಾತ್ರವಲ್ಲ ಫೋರೆನ್ಸಿಕ್ ತಜ್ಞರು ಹಾಗೂ ಶ್ವಾನದಳವೂ ಆಗಮಿಸಿ ತನಿಖೆ  ನಡೆಸಿ ಕೆಲವೊಂದು ಪುರಾವೆಗಳನ್ನು ಸಂಗ್ರಹಿಸಿದೆ.

ಈ ಘಟನೆಗೆ ಸಂಬಂಧಿಸಿ ರೈಲ್ವೇ ಕಾನೂನಿನ ೧೫೦ ಎ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿ ತನಿಖ ಆರಂಭಿಸಿದ್ದಾರೆ. ಬೇಕಲ ಡಿವೈಎಸ್ಪಿ ಸಿ.ಕೆ.ಸುನಿಲ್ ಕುಮಾರ್ ನೇತೃತ್ವದ ವಿಶೇಷ ಪೊಲೀಸ್ ತಂಡವನ್ನು ತನಿಖೆಗಾಗಿ ನೇಮಿಸಲಾಗಿದೆ. ಜಿಲ್ಲಾ ವರಿಷ್ಠ  ಪೊಲೀಸ್ ಅಧಿಕಾರಿ ಡಾ. ವೈಭವ್ ಸಕ್ಸೇನಾರ ಮೇಲ್ನೋಟದಲ್ಲಿ ಈ ತನಿಖೆ ನಡೆಯುತ್ತಿದೆ.

RELATED NEWS

You cannot copy contents of this page