ಲಾಡ್ಜ್‌ನಲ್ಲಿ 9 ಬಾರಿ ಯುವತಿಗೆ ಕಿರುಕುಳ: ಮುಖ್ಯ ಆರೋಪಿ ಸೆರೆ
ಕಾಸರಗೋಡು: ಕಣ್ಣೂರು ಜಿಲ್ಲೆಯ ಮಟ್ಟನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ೨೨ರ ಹರೆಯದ ಯುವತಿಗೆ ಕಾಞಂಗಾಡ್‌ನ ಲಾಡ್ಜ್‌ನಲ್ಲಿ ಕಿರುಕುಳ ನೀಡಿದ ಪ್ರಕರಣ ದಲ್ಲಿ ಮುಖ್ಯ ಆರೋಪಿ ಸೆರೆಗೀಡಾಗಿ ದ್ದಾನೆ. ಮಾಣಿಕ್ಕೋತ್‌ನ ಮೊಹಮ್ಮದ್ ಸೆನಾನ್ (23) ಎಂಬಾತನನ್ನು ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದಲ್ಲಿ ಬಂಧಿಸಲಾಗಿದೆ. ಸಾಮಾಜಿಕ ತಾಣದ ಮೂಲಕ ಯುವತಿಯನ್ನು ಮೊಹ ಮ್ಮದ್ ಸೆನಾನ್ ಪರಿಚಯಗೊಂಡಿದ್ದನು. ಬಳಿಕ ಹಲವು ಬಾರಿ ಯುವತಿಯನ್ನು ಕಾಞಂಗಾಡ್‌ಗೆ ಬರಮಾಡಿಕೊಂಡು ಲಾಡ್ಜ್‌ನಲ್ಲಿ ಕೊಠಡಿ ಪಡೆದು ಕಿರುಕುಳ ನೀಡಿರುವುದಾಗಿ ದೂರಲಾಗಿದೆ.
ಅನಂತರ ಮದುವೆ ಭರವಸೆಯಿಂದ ಹಿಂಜರಿದ ಹಿನ್ನೆಲೆಯಲ್ಲಿ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಮಟ್ಟನ್ನೂರು ಪೊಲೀಸರು ದಾಖಲಿಸಿ ಕೊಂಡ ಪ್ರಕರಣವನ್ನು ಹೊಸದುರ್ಗ ಪೊಲೀಸರಿಗೆ ಹಸ್ತಾಂತರಿಸ ಲಾಗಿತ್ತು. ಯುವತಿಗೆ ಕಾಞಂಗಾಡ್‌ನ ಒಂದೇ ಲಾಡ್ಜ್‌ನಲ್ಲಿ ೯ ಬಾರಿ ಕಿರುಕುಳ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 9 ಬಾರಿಯೂ ಕೊಠಡಿ ಪಡೆಯಲು ಒಂದೇ ಗುರುತು ಚೀಟಿಯನ್ನು ಆರೋಪಿ ನೀಡಿದ್ದನು. ಪ್ರಕರಣದಲ್ಲಿ ಇನ್ನೋರ್ವ ಆರೋಪಿಯಾದ ಇಮ್ತಿಯಾಸ್ ಎಂಬಾತ ಗಲ್ಫ್‌ಗೆ ಪರಾರಿಯಾಗಿದ್ದಾನೆ. ಈತನನ್ನು ಊರಿಗೆ ತಲುಪಿಸಲು ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ಯ ಆರೋಪಿಯಾದ ಮೊಹಮ್ಮದ್ ಸೆನಾನ್‌ಗೆ ವಾಹನ ಸೌಕರ್ಯ ಏರ್ಪಡಿಸಿಕೊಟ್ಟ ಆರೋಪ ದಂತೆ ಇಮ್ತಿಯಾಸ್ ವಿರುದ್ಧ ಕೇಸು ದಾಖಲಿಸಲಾಗಿದೆ.