ದಿನೇಶ್ ಬೀಡಿ ನೌಕರೆಗೆ ಬೀಳ್ಕೊಡುಗೆ 

ಬದಿಯಡ್ಕ: ದಿನೇಶ್ ಬೀಡಿ ಕಂಪೆನಿಯ ಬದಿಯಡ್ಕ ಶಾಖೆಯಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಓಮನ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ದಿನೇಶ್ ಬೀಡಿ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಖೆಯ ಕಾರ್ಯದರ್ಶಿ ಶ್ರೀಜ ಅವರು ಕಾಲುದೀಪ ನೀಡಿ ಓಮನರನ್ನು ಸನ್ಮಾನಿಸಿದರು.

ನೌಕರರಾದ  ಚಂದ್ರನ್, ಸರೋಜಿನಿ ಸ್ಮರಣಿಕೆ ನೀಡಿ, ಶಾಲು ಹೊದಿಸಿ ಗೌರವಿಸಿದರು. ಓಮನ ೧೯೮೬ರಲ್ಲಿ  ದಿನೇಶ್ ಬೀಡಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು.  ಇವರು ಬದಿಯಡ್ಕದಲ್ಲಿ ಪತ್ರಿಕೆ ವಿತರಣೆ ನಡೆಸುವ  ಬಾಲಕೃಷ್ಣರ ಪತ್ನಿಯಾಗಿದ್ದಾರೆ. ವಿನೋದ್, ಚಿತ್ರ ಎಂಬಿವರು ಮಕ್ಕಳಾಗಿದ್ದಾರೆ.

RELATED NEWS

You cannot copy contents of this page