ಲೋಕಸಭಾ ಚುನಾವಣೆ: ಸಿದ್ಧತೆ ಆರಂಭಿಸುವಂತೆ ಕೇಂದ್ರ ಚುನಾವಣಾ ಆಯೋಗ ನಿರ್ದೇಶ
ಕಾಸರಗೋಡು: ಲೋಕಸಭೆಗೆ ಮುಂದಿನವರ್ಷ ಚುನಾವಣೆ ನಡೆಯಲಿರುವಂತೆಯೇ ಅದಕ್ಕೆ ಅಗತ್ಯದ ಪೂರ್ವಭಾವಿ ಸಿದ್ಧತೆಗಳನ್ನು ಆರಂಭಿಸುವಲ್ಲಿ ಕೇಂದ್ರ ಚುನಾವಣಾ ಆಯೋಗ ರಾಜ್ಯ ಚುನಾವಣಾ ಅಧಿಕಾರಿಗೆ ನಿರ್ದೇಶ ನೀಡಿದೆ. ಅದರಂತೆ ಅಗತ್ಯದ ಕ್ರಮಗಳಲ್ಲಿ ತೊಡಗುವಂತೆ ರಾಜ್ಯ ಚುನಾವಣಾ ಅಧಿಕಾರಿ ರಾಜ್ಯ ಉಪಚುನಾವಣಾ ಆಯುಕ್ತರು ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳಾಗಿರುವ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ನಿರ್ದೇಶ ನೀಡಿದ್ದಾರೆ. ಅದರಂತೆ ಅಗತ್ಯದ ಪೂರ್ವಭಾವಿ ಕ್ರಮಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ.
ಮತದಾನ ಯಂತ್ರ ನಿರ್ಮಾಣ ಸಂಸ್ಥೆಯಾದ ಭಾರತ್ ಇಲೆಕ್ಟ್ರೋನಿಕ್ಸ್ ಲಿಮಿಟೆಡ್‌ನ ಇಂಜಿನಿಯರ್‌ಗಳು ಹಾಗೂ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳು ಮತ್ತು ಅಂಗೀಕೃತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಾನಿಧ್ಯದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಇವಿಎಂ ವೇರ್‌ಹೌಸ್‌ಗಳಲ್ಲಿ ಮತದಾನ ಯಂತ್ರಗಳ ಪರಿಶೀಲನೆ ಆರಂಭಿಸಲಾ ಗಿದೆ. ಮತದಾನ ಯಂತ್ರಗಳ ವಿ.ವಿ ಪ್ಯಾಟ್‌ಗಳ ಪ್ರಾಥಮಿಕ ಪರಿಶೀಲನೆ ಈಗಾಗಲೇ ಪೂರ್ಣಗೊಂಡಿದೆ. ದ್ವಿತೀ ಯ ಹಂತದ ಪರಿಶೀಲನೆ ಈಗ ನಡೆ ಯುತ್ತಿದೆ. ರಾಜ್ಯದಲ್ಲಿ ೫೦ ಸಾವಿರಕ್ಕಿಂ ತಲೂ ಹೆಚ್ಚು ಮತದಾನ ಯಂತ್ರಗಳನ್ನು ಕಳಚಿ ಅವುಗಳನ್ನು ಶುಚೀಕರಿಸಲಾಗಿದೆ. ಮಾತ್ರವಲ್ಲ ೫೦ ಸಾವಿರ ವಿವಿ ಪ್ಯಾಟ್ ಯಂತ್ರಗಳನ್ನೂ ಪರಿಶೀಲಿಸಲಾಗಿದೆ. ತಂತ್ರಜ್ಞಾನ ತಜ್ಞರ ಸಾನಿಧ್ಯದಲ್ಲಿ ಕುಟುಂಬಶ್ರೀ ಕಾರ್ಯ ಕರ್ತರು ಮತ್ತು ವಲಸೆ ಕಾರ್ಮಿಕರನ್ನು ಉಪಯೋಗಿಸಿ ಮತದಾನ ಯಂತ್ರಗಳನ್ನು ಶುಚೀಕರಿಸಲಾಯಿತು.