ಲೋಕಸಭಾ ಚುನಾವಣೆ: ಸಿಪಿಐ ಉಮೇದ್ವಾರರ ಯಾದಿ ಪ್ರಕಟ

ತಿರುವನಂತಪುರ: ಲೋಕಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕೇರಳದಲ್ಲಿ ಸ್ಪರ್ಧಿಸುವ ತನ್ನ ಪಕ್ಷದ ನಾಲ್ಕು ಉಮೇದ್ವಾರರ ಯಾದಿ ಯನ್ನು ಸಿಪಿಐ ವಿದ್ಯುಕ್ತವಾಗಿ ಪ್ರಕಟಿಸಿದೆ.

ಇದರಂತೆ ತಿರವನಂತಪುರ ಲೋಕಸಭಾ ಕ್ಷೇತ್ರದಲ್ಲಿ  ಸಿಪಿಐಯ ಹಿರಿಯ ನೇತಾರ ಪನ್ಯನ್ ರವೀಂದ್ರನ್ ರನ್ನು ಕಣಕ್ಕಿಳಿಸಲಾಗಿದೆ. ಉಳಿದಂತೆ ಮಾವೇಲಿಕ್ಕರದಲ್ಲಿ ಸಿ.ಎ ಅರುಣ್ ಕುಮಾರ್, ತೃಶೂರಿನಲ್ಲಿ ಸಚಿವ ಎಸ್. ಸುನಿಲ್ ಕುಮಾರ್ ಮತ್ತು ವಯನಾಡಿನಲ್ಲಿ  ಆನಿರಾಜರನ್ನು ಸಿಪಿಐ ಕಣಕ್ಕಿಳಿಸಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋ ವಿಶ್ವಂ ತಿಳಿಸಿದ್ದಾರೆ. ವಯನಾಡಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸುವ ವಿಷಯದಲ್ಲಿ ಇನ್ನೂ ಅನಿಶ್ಚಿತತೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಆ ಕ್ಷೇತ್ರದಲ್ಲಿ ಸಿಪಿಐಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಆನಿರಾಜಾರನ್ನು ಸ್ಪರ್ಧೆಗಿಳಿ ಸುವ ತೀರ್ಮಾನ ಕೈಗೊಳ್ಳಲಾಗಿ ದೆಯೆಂದೂ ಅವರು ತಿಳಿಸಿದ್ದಾರೆ.

RELATED NEWS

You cannot copy contents of this page