ವರ್ಕಾಡಿ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ವಿಭಾಗಗಳು ಸಿಪಿಎಂ, ಬಿಜೆಪಿಯೊಂದಿಗೆ
ಸಹಕರಿಸಲು ಸಾಧ್ಯವೆಂದು ಅವರು ಪ್ರಶ್ನಿಸುತ್ತಿದ್ದಾರೆ. ಇದೇ ವೇಳೆ ಪ್ರಸ್ತುತ ಸಿಪಿಎಂನ ಬೆಂಬಲದೊಂದಿಗೆ ಕಾಂಗ್ರೆಸ್ ಸಹಕಾರಿ ಸಂಘ ಆಡಳಿತ ನಡೆಸುತ್ತಿದೆ ಯೆಂದೂ ಕಾಂಗ್ರೆಸ್‌ಗೆ ಐದು, ಲೀಗ್‌ಗೆ ಮೂರು, ಸಿಪಿಎಂಗೆ ಒಂದು, ಸಿಪಿಐಗೆ ಒಂದು, ಕೇರಳ ಕಾಂಗ್ರೆಸ್ ಮಾಣಿ ಗ್ರೂಪ್‌ಗೆ ಓರ್ವ ಸದಸ್ಯರಿದ್ದಾರೆಂದೂ ಅದರಂತೆ ಈ ಬಾರಿಯೂ ಸ್ಪರ್ಧಿಸಲಾ ಗುತ್ತಿದೆಯೆಂ ದೂ ಆ ಪಕ್ಷದ ಪದಾಧಿಕಾಪರಿಗಳ ಪೈಕಿ ಕೆಲವರು ತಿಳಿಸುತ್ತಿದ್ದಾರೆ. ಇದೇ ವೇಳೆ ಮಂಜೇಶ್ವರದ ಕಾಂಗ್ರೆಸ್ ನೇತಾರರು ಹರ್ಷಾದ್ ವರ್ಕಾಡಿಯ ನೇತೃತ್ವದಲ್ಲಿ ಮತ್ತೊಂದು ಭಾಗದಲ್ಲಿ ಶಕ್ತಿ ತುಂಬುತ್ತಿದ್ದಾರೆ. ಈ ಸಮಸ್ಯೆಯನ್ನು ಕಾಂಗ್ರೆಸ್ ಜಿಲ್ಲಾ ಸಮಿತಿಗೆ ತಿಳಿಸಿದ್ದರೂ ಅವರು ಪಕ್ಷದ ಮಂಡಲ ಸಮಿತಿಗೆ ಮರಳಿ ಕಳುಹಿಸಿರುವುದಾಗಿ ಮಾಹಿತಿಯಿದೆ. ಮಂಡಲದ ಕಮಿಟಿ ಯುಡಿಎಫ್ ಕಮಿಟಿಗೆ ಸಮಸ್ಯೆಯನ್ನು ಹಸ್ತಾಂತರಿಸಿರುವುದಾಗಿ ಹೇಳಲಾಗುತ್ತಿದೆ. ಬ್ಯಾಂಕ್‌ನಲ್ಲಿ ನಡೆದ ಎರಡು ನೇಮಕಾತಿಗಳು ಸಮಸ್ಯೆಗೆ ಕಾರಣವೆಂದೂ ಅದನ್ನು ಮರೆಮಾಚಿಕೊಂಡು ಯಾವುದೇ ನಿಲುವು ಕೈಕೊಂಡು ತಮಗೆ ಸಹಕರಿಸಲು ಸಾಧ್ಯವಿಲ್ಲವೆಂದು ಕಾಂಗ್ರೆಸ್‌ನ ಮತ್ತೊಂದು ವಿಭಾಗ ಹೇಳುತ್ತಿದೆ. ಬ್ಯಾಂಕ್‌ನ ೧೧ ಡೈರೆಕ್ಟರ್ ಸ್ಥಾನಗಳಲ್ಲಿ ೭ರಲ್ಲಿ ಮಾತ್ರವೇ ಇವರು ಸ್ಪರ್ಧಿಸು ತ್ತಿದ್ದಾರೆ. ನಾವು ನಾಲ್ಕು ಸೀಟಿನಲ್ಲಿ ಮಾತ್ರವೇ ಸ್ಪರ್ಧಿಸುತ್ತಿರು ವುದಾಗಿ ಬಿಜೆಪಿ ಹೇಳುತ್ತಿದೆ. ಲೋಕಸಭಾ ಚುನಾವಣೆಗೆ ಸಿದ್ಧತೆಗಳು ನಡೆಯು ತ್ತಿರುವಾಗಲೇ ಈ ರೀತಿಯ ವಿದ್ಯಮಾ ನಗಳು ನಡೆಯುತ್ತಿರುವುದು ಯುಡಿಎಫ್ ಕಾರ್ಯಕರ್ತರಲ್ಲಿ ನಿರಾಶೆ ಮೂಡಿಸಿದೆ.