ವಲಸೆ, ವಿದೇಶಿಯರ ಮಸೂದೆ ಲೋಕಸಭೆಯಲ್ಲಿ ಮಂಡನೆ
ನವದೆಹಲಿ: ವಲಸೆ ಮತ್ತು ವಿದೇಶಿಯರ ಮಸೂದೆಯನ್ನು ಲೋಕಸಭೆಯಲ್ಲಿ ಇಂದು ಮಂಡಿಸಲಾ ಗಿದೆ. ಅಕ್ರಮ ವಲಸಿಗರ, ಅದರಲ್ಲೂ ವಿಶೇಷವಾಗಿ ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗರು ಭಾರತದೊಳಗೆ ಅಕ್ರಮವಾಗಿ ಪ್ರವೇಶಿಸುವುದಕ್ಕೆ ಗೃಹ ವ್ಯವಹಾರಗಳ ಸಂಸದೀಯ ಸಮಿತಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಮತ್ತು ಕಾನೂನುಬಾಹಿರವಾಗಿ ಭಾರತದಲ್ಲಿ ನೆಲೆಸಿರುವ ಎಲ್ಲರನ್ನೂ ಗುರುತಿಸಿ ಅವರನ್ನು ಸ್ವದೇಶಕ್ಕೆ ಕಳುಹಿಸಿಕೊಡಲು ನಿರ್ಣಾಯಕ ಕ್ರಮ ಕೈಗೊಳ್ಳುವಂ ತೆಯೂ ಗೃಹ ಸಚಿವಾಲಯವನ್ನು ಸಂಸದೀಯ ಸಮಿತಿ ಒತ್ತಾಯಿಸಿದೆ.
ಗಡಿ ಮೂಲ ಸೌಕರ್ಯ ಮತ್ತು ಭದ್ರತೆಯನ್ನು ಪರಿಶೀಲಿಸಿದ ಸಮಿತಿ ಅಕ್ರಮ ಗಡಿ ದಾಟುವಿಕೆಯನ್ನು ತಡೆಯಲು ನಿಗದಿಪಡಿಸಿದ ನಿಧಿಗಳ ಸಮರ್ಥ ಬಳಕೆ ಮತ್ತು ಸುಧಾರಿತ ಕಣ್ಗಾವಲು ತಂತ್ರಜ್ಞಾನಗಳ ಅಗತ್ಯವನ್ನೂ ಒತ್ತಿ ಹೇಳಿದೆ.
ವಿವಿಧ ಅಂತಾರಾಷ್ಟ್ರೀಯ ಗಡಿಗಳಲ್ಲಿ ಮೂಲ ಸೌಕರ್ಯವನ್ನು ಹೆಚ್ಚಿಸಲು ಸಚಿವಾಲಯ ಹೆಚ್ಚಿನ ಗಮನ ಹರಿಸಬೇಕಾಗಿದೆ. ಹಂಚಿಕೆಯಾದ ಎಲ್ಲಾ ನಿಧಿಗಳನ್ನು ಸಮರ್ಥವಾಗಿ ಬಳಸುವು ದನ್ನು ಖಾತರಿಪಡಿಸಬೇಕು. ಬೇಲಿ ಯೋಜನೆಗಳನ್ನು ಪೂರ್ಣಗೊಳಿಸುವ ಅಗತ್ಯವನ್ನು ಸರಕಾರ ತ್ವರಿತಗೊಳಿಸ ಬೇಕೆಂದೂ ಸಂಸದೀಯ ಸಮಿತಿ ಆಗ್ರಹಪಟ್ಟಿದೆ. ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾ ಮತ್ತು ಇತರ ದೇಶಗಳ ವಲಸಿಗರ ಒಳಹರಿವಿನ ಡೇಟಾವನ್ನು ಸಿದ್ಧಪಡಿಸಬೇಕು. ರೋಹಿಂಗ್ಯಾ ಮತ್ತು ಬಾಂಗ್ಲಾ ದೇಶಿಗರು ದೇಶದ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ಪ್ರವೇಶಿಸಿ ಭಾರತದೊಳಗೆ ನೆಲೆಸತೊಡಗಿದ್ದಾರೆ. ಅದರ ವಿರುದ್ಧ ಕಟ್ಟುನಿಟ್ಟಿನ ಕ್ರಮದ ಅಗತ್ಯವಿದೆ. ಇದನ್ನು ತಡೆಗಟ್ಟಲು ಥರ್ಮಲ್ ಇಮೇಜರ್‌ಗಳು, ಫೈಬರ್ ಅಪ್ಟಿಕ್ ಸೆನ್ಸರ್‌ಗಳು, ರ‍್ಯಾಡಾರ್‌ಮತ್ತು ಸೋಲಾರ್ ವ್ಯವಸ್ಥೆಗಳಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ನೈಜ ಸಮಯದ ಕಣ್ಗಾವಲು ಮತ್ತು ಒಳ ನುಸುಳುವಿಕೆ ಪತ್ತೆಗೆ ಸಹಾಯ ಮಾಡುವ ಅಗೋಚರ ಇಲೆಕ್ಟ್ರಾನಿಕ್ ತಡೆಗೋಡೆಯನ್ನು ರಚಿಸಬೇಕು. ಆ ಮೂಲಕ ಭಾರತದ ಗಡಿ ಭದ್ರತೆಯನ್ನು ಇನ್ನಷ್ಟು ಬಲಪಡಿ ಸಬೇಕೆಂದೂ ಸಮಿತಿ ಆಗ್ರಹಪಟ್ಟಿದೆ.