ವಾಟರ್ ಪ್ಯೂರಿಫಯರ್ ಸಂಸ್ಥೆಗೆ ತಲುಪಿದ ವ್ಯಕ್ತಿಯಿಂದ ಗುಪ್ತಾಂಗ ಪ್ರದರ್ಶನ: ಸೆರೆ

ಮುಳ್ಳೇರಿಯ: ವಾಟರ್ ಪ್ಯೂರಿಫಯರ್ ಸಂಸ್ಥೆಗೆ ತಲುಪಿ ಪ್ಯಾಂಟ್‌ನ ಜಿಪ್ ತೆಗೆದು ನೌಕರೆಯಾದ ೩೦ರ ಯುವತಿಗೆ  ಗುಪ್ತಾಂಗ ತೋರಿಸಿದ ಬಗ್ಗೆ ದೂರಲಾಗಿದೆ. ಕಾರಡ್ಕ ಎರಿಂಜೇರಿ ನಿವಾಸಿಯಾದ ೩೦ರ ಹರೆಯದ ಯುವತಿ ನೀಡಿದ ದೂರಿನಂತೆ ಉದುಮ ಬೇವೂರಿ ಪಡಿಂಞಾರ್ ನಿವಾಸಿ ಮುಹಮ್ಮದ್ ಸುಲ್ಫೀಕರ್ ಅಲಿ (25) ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ಬಳಿಕ ಈತನನ್ನು ಸೆರೆ ಹಿಡಿಯಲಾಗಿದೆ. ಆದರೆ ಈತನಿಗೆ ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆ. ನಿನ್ನೆ ಅಪರಾಹ್ನ ೨.೩೦ರ ವೇಳೆ ಕೇಸಿಗೆ ಆಸ್ಪದವಾದ ಘಟನೆ ನಡೆದಿದೆ. ಸ್ಕೂಟರ್‌ನಲ್ಲಿ ಈತ ವಾಟರ್ ಪ್ಯೂರಿಫಯರ್ ಸಂಸ್ಥೆಗೆ ತಲುಪಿದ್ದು, ಈ ಸಮಯದಲ್ಲಿ ಅಂಗಡಿಯಲ್ಲಿ ಇತರ ಯಾರೂ ಇರಲಿಲ್ಲ. ಕುರ್ಚಿಯಲ್ಲಿ ಕುಳಿತುಕೊಂಡು ಸಂಸ್ಥೆಯ ಬಗ್ಗೆ ಮಾತುಕತೆ ಆರಂಭಿಸಿದ್ದಾನೆ. ಈ ಮಧ್ಯೆ ದಿಢೀರನೆ ಎದ್ದುನಿಂತು ಪ್ಯಾಂಟ್‌ನ ಜಿಪ್ ತೆಗೆದು ಗುಪ್ತಾಂಗವನ್ನು ಪ್ರದರ್ಶಿಸಿರುವುದಾಗಿ ದೂರಲಾಗಿದೆ. ಯುವತಿ ಬೊಬ್ಬೆಹೊಡೆದ ಹಿನ್ನೆಲೆಯಲ್ಲಿ ಯುವಕ ಸಂಸ್ಥೆಯಿಂದ ಇಳಿದು ಓಡಿಹೋಗಿದ್ದಾನೆನ್ನಲಾಗಿದೆ. ನೌಕರೆ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಅಂಗಡಿ ಮಾಲಕ ಸ್ಥಳಕ್ಕೆ ತಲುಪಿ ಸ್ಥಳೀಯರನ್ನು ಸೇರಿಸಿಕೊಂಡು ಯುವಕನಿಗಾಗಿ ವಾಹನದಲ್ಲಿ ಹುಡುಕಾಟ ಆರಂಭಿಸಿದರು. ಕಿಲೋ ಮೀಟರ್‌ಗಳ ದೂರ ಬೆನ್ನಟ್ಟಿ ಮೊಹಮ್ಮದ್ ಸುಲ್ಫೀಕರ್ ಅಲಿಯನ್ನು ಸೆರೆ ಹಿಡಿದು ಆದೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಆರೋಪಿ ವಿರುದ್ಧ ಇದೇ ರೀತಿಯಲ್ಲಿರುವ ದೂರು ಇನ್ನಿತರ ಯಾವುದಾದರೂ ಠಾಣೆಯಲ್ಲಿ ದಾಖಲಾಗಿದೆಯೋ ಎಂಬ ಬಗ್ಗೆ  ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page