ವಿಜಿಲೆನ್ಸ್ ಪರಿಶೀಲನೆ ಮೊಬೈಲ್ ಟವರ್‌ನಿಂದ ತೆರಿಗೆ ವಸೂಲಿ ಮಾಡದ ಪಂಚಾಯತ್‌ಗೆ ಎರಡು ಲಕ್ಷ ರೂ. ನಷ್ಟ

ಉಪ್ಪಳ: ಮೊಬೈಲ್ ಟವರ್ ಸ್ಥಾಪಿಸಿದ ಸ್ಥಳದಿಂದ ಸಕಾಲದಲ್ಲಿ ತೆರಿಗೆ ವಸೂಲಿ ಮಾಡದ ಮಂಗ ಲ್ಪಾಡಿ ಗ್ರಾಮ ಪಂಚಾಯತ್‌ಗೆ 2.10 ಲಕ್ಷ  ರೂ.ಗಳ  ನಷ್ಟ ಉಂಟಾಗಿದೆ. ಕಾಸರಗೋಡು ವಿಜಿಲೆನ್ಸ್ ಇನ್‌ಸ್ಪೆಕ್ಟರ್ ಪಿ. ನಾರಾಯಣನ್ ನೇತೃತ್ವದ ತಂಡ ನಿನ್ನೆ  ಮಂಗಲ್ಪಾಡಿ ಪಂಚಾಯತ್ ಕಚೇರಿಯಲ್ಲಿ   ಪರಿಶೀಲನೆ ನಡೆಸಿದ್ದು, ಅದರಲ್ಲಿ ಈ ನಷ್ಟ ಪತ್ತೆಯಾಗಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

2013-14 ನೇ ಆರ್ಥಿಕ ವರ್ಷದಲ್ಲಿ ಈ ನಷ್ಟ ಉಂಟಾಗಿದೆ. ಈ ಅವಧಿಯಲ್ಲಿ ಎರಡು ಖಾಸಗಿ ಮೊಬೈಲ್ ಸಂಸ್ಥೆಗಳಿಂದ ತೆರಿಗೆ ವಸೂಲಿ ಮಾಡಲಾಗಿಲ್ಲವೆಂದೂ ತೆರಿಗೆ ವಸೂಲಿ ಮಾಡುವ ವಿಷಯ ದಲ್ಲಿ ಪಂಚಾ ಯತ್‌ನ ಸಂಬಂಧ ಪಟ್ಟವರು ತಳೆದ ನಿರ್ಲಕ್ಷ್ಯದಿಂದ ಈ ನಷ್ಟ ಉಂ ಟಾಗಿದೆಯೆಂದು ವಿಜಿಲೆನ್ಸ್ ಅಧಿಕಾ ರಿಗಳು ತಿಳಿಸಿದ್ದಾರೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 19 ಮೊಬೈಲ್ ಟವರ್‌ಗಳಿವೆ.

RELATED NEWS

You cannot copy contents of this page