ವಿಧಾನಸಭೆ ಚುನಾವಣೆ: ಎಕ್ಸಿಟ್‌ಪೋಲ್‌ಗೆ ನಿಷೇಧ
ನವದೆಹಲಿ: ಜಮ್ಮು- ಕಾಶ್ಮೀರ ಮತ್ತು ಹರ್ಯಾಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಎಕ್ಸಿಟ್‌ಪೋಲ್ ಸಮೀಕ್ಷೆಗಳನ್ನು ಬಿಡುಗಡೆಮಾಡುವುದಕ್ಕೆ ನಿಷೇಧ ಹೇರಿ ಭಾರತೀಯ ಚುನಾವಣಾ ಆಯೋಗ ಇಂದು ವಿದ್ಯುಕ್ತ ಅಧಿಸೂಚನೆ ಜ್ಯಾರಿಗೊಳಿಸಿದೆ.
ಸೆ. ೧೮ರಂದು ಬೆಳಿಗ್ಗೆ ೭ರಿಂದ ಮತದಾನದ ಅಂತಿಮ ದಿನವಾದ ಅಕ್ಟೋಬರ್ 5ರಂದು ಸಂಜೆ 6.30ರ ವರೆಗೆ ಈ ನಿರ್ಬಂಧ ಜ್ಯಾರಿಯಲ್ಲಿ ರುತ್ತದೆ. ಈ ಕ್ರಮವು ಚುನಾವಣಾ ಸಮಯದಲ್ಲಿ ನ್ಯಾಯಸಮ್ಮತತೆ ಕಾಡುವ ಕಾರ್ಯವಿಧಾನವಾಗಿದೆಯೆಂದು ಚುನಾವಣಾ ಆಯೋಗ ಹೇಳಿದೆ.
1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 126 ಎ ಯನ್ನು ಪ್ರೇರೇಪಿಸುವ ಅಧಿಕೃತ ಹೇಳಿಕೆಯು ನಿರ್ಧಿಷ್ಟ ಅವಧಿಯಲ್ಲಿ ಮುದ್ರಣ, ವಿದ್ಯುನ್ಮಾನ ಮಾಧ್ಯಮ ಅಥವಾ ಇತರ ಯಾವುದೇ ಪ್ರಕಾರದ ಮೂಲಕ ಯಾವುದೇ ಎಕ್ಸಿಟ್‌ಪೋಲ್ ಸಮೀಕ್ಷೆ ನಡೆಸುವುದು ಹಾಗೂ ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು ನಿಷೇಧಿಸುತ್ತಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಎಕ್ಸಿಟ್‌ಪೋಲ್ ಫಲಿತಾಂಶಗಳು ಮತದಾರರ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆಯೆಂದು ಆಯೋಗ ತಿಳಿಸಿದೆ. ಜಮ್ಮು-ಕಾಶ್ಮೀರ ಮತ್ತು ಹರ್ಯಾಣ ವಿಧಾನಸಭೆಗಳ ಚುನಾವಣೆಗಳ ಬಳಿಕ ಮಹಾರಾಷ್ಟ್ರ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ಅದರ ದಿನಾಂಕವನ್ನು ಚುನಾವಣಾ ಆಯೋಗ ಇನ್ನಷ್ಟೇ ಪ್ರಕಟಿಸಲು ಬಾಕಿಯಿದೆ.