ವಿಮಾನ ನಿಲ್ದಾಣದಲ್ಲಿ 9 ಕೋಟಿ ರೂ. ಮೌಲ್ಯದ ಹೈಬ್ರೀಡ್ ಗಾಂಜಾ ಪತ್ತೆ: ಇಬ್ಬರ ಸೆರೆ
ಕಲ್ಲಿಕೋಟೆ: ಕರಿಪ್ಪೂರ್ ಅಂ ತಾರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಪೊಲೀಸರು ನಡೆಸಿದ ಕಾರ್ಯಾ uಚರಣೆಯಲ್ಲಿ ೯ ಕೋಟಿ ರೂ. ಮೌಲ್ಯದ ಹೈಬ್ರೀಡ್ ಗಾಂಜಾ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಕಣ್ಣೂರು ಮಟ್ಟನ್ನೂರು ನಿವಾಸಿ ಪಿಂಟ್‌ಜಿಲ್ ಮತ್ತು ತಲಶ್ಶೇರಿಯ ಆರ್. ಬಾಬು (33) ಎಂಬವರನ್ನು ಬಂಧಿಸಲಾಗಿದೆ.
ಆ ವೇಳೆ ಅವರ ಜತೆಗಿದ್ದವರು ಪರಾರಿಯಾಗಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತರು ಅಬುದಾಬಿಯಿಂದ ಈ ಮಾಲನ್ನು ಸಾಗಿಸಿದ್ದರು. ವಶಪಡಿಸಲಾದ ಮಾಲಿನಲ್ಲಿ ಒಟ್ಟು 18 ಕಿಲೋ ಹೈಬ್ರೀಡ್ ಗಾಂಜಾವನ್ನು ಅವರಿಂದ ಪತ್ತೆಹಚ್ಚಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಪರಾರಿಯಾದವರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ.