ಶಾಲು ಕುತ್ತಿಗೆಗೆ ಬಿಗಿದು ಯುವತಿಯ ಕೊಲೆ: ಪತಿ ಆತ್ಮಹತ್ಯೆ

ಗಾಸಿಯಾಬಾದ್: ಶಾಲನ್ನು ಕುತ್ತಿಗೆಗೆ ಬಿಗಿದು ಪತ್ನಿಯನ್ನು ಕೊಂದ ಬಳಿಕ ಮೃತದೇಹದ ಜೊತೆಯಲ್ಲಿ ಸೆಲ್ಫಿ ತೆಗೆದು ಬಳಿಕ ಆತ್ಮಹತ್ಯೆಗೈದ ಘಟನೆ ಉತ್ತರಪ್ರದೇಶದ ಗಾಸಿಯಾಬಾದ್‌ನಲ್ಲಿ ನಡೆದಿದೆ. ಯುವತಿ ಕೆಲಸಕ್ಕೆ ಹೋಗುವುದರ ಬಗ್ಗೆ ಉಂಟಾದ ವಾಗ್ವಾದದಿಂದ ಹಲವು ಬಾರಿ ಘರ್ಷಣೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೈದ ದಿನದಂದು ಕೂಡಾ ಇವರ ಮಧ್ಯೆ ವಾಗ್ವಾದ ಹೊಕೈ ಉಂಟಾಗಿದೆ ಎಂದು ಹೇಳಲಾಗಿದೆ. ಈ ಮಧ್ಯೆ ಶಾಲನ್ನು ಕುತ್ತಿಗೆಗೆ ಬಿಗಿದು ಯುವತಿಯನ್ನು ಪತಿ ಕೊಲೆಗೈದಿದ್ದಾನೆ. ಬಳಿಕ ಮೃತದೇಹದ ಜೊತೆ ಸೆಲ್ಫಿ ತೆಗೆದು ಅದನ್ನು ಸಂಬಂಧಿಕರಿಗೆ ರವಾನಿಸಿದ್ದಾನೆ. ಅದರ ಬೆನ್ನಲ್ಲೇ ಅದೇ ಶಾಲನ್ನು ಉಪಯೋಗಿಸಿ ನೇಣು ಬಿಗಿದು ಪತಿಯೂ ಮೃತಪಟ್ಟಿದ್ದಾನೆ. ಸಂಬಂಧಿಕರು ಬಂದು ನೋಡುವಾಗ ಇಬ್ಬರ ಮೃತದೇಹ ಸಮೀಪದಲ್ಲೇ ಪತ್ತೆಯಾಗಿದೆ. ಮೃತದೇಹವನ್ನು ಪೋಸ್ಟ್‌ಮಾರ್ಟಂಗಾಗಿ ಆಸ್ಪತ್ರೆಗೆ ಕೊಂಡುಹೋಗಲಾಗಿದೆ.

You cannot copy contents of this page