ಶಾಸಕ ಅನ್ವರ್‌ಗೆ ಸಿಪಿಎಂನೊಂದಿಗೆ ಯಾವುದೇ ಸಂಬಂಧವಿಲ್ಲ- ಎಂ.ವಿ. ಗೋವಿಂದನ್

ದೆಹಲಿ: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಬಹಿರಂಗವಾಗಿ ಆಕ್ಷೇಪಿಸಿದ ಶಾಸಕ ಪಿ.ವಿ. ಅನ್ವರ್ ವಿರುದ್ಧ ಜನರು ಹಾಗೂ ಪಕ್ಷದ ಕಾರ್ಯ ಕರ್ತರು ರಂಗಕ್ಕಿಳಿಯಬೇಕೆಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ತಿಳಿಸಿ ದ್ದಾರೆ. ಅನ್ವರ್‌ಗೆ ಪಕ್ಷದೊಂದಿಗೆ ಇನ್ನು ಯಾವುದೇ ಸಂಬಂಧವಿಲ್ಲ ವೆಂದೂ ಅವರು ತಿಳಿಸಿದ್ದಾರೆ. ಅನ್ವರ್ ಬಹಿರಂಗವಾಗಿ ಹೇಳಿಕೆ ನೀಡುವುದನ್ನು ತಡೆದರೂ ಅನ್ವರ್ ಅದನ್ನು ಅನುಸರಿಸಿಲ್ಲ. ಪಕ್ಷ ಹಾಗೂ ಸಿಪಿಎಂನ ವಿರುದ್ಧ ನಿರಂತರ ಪತ್ರಿಕಾಗೋಷ್ಠಿ ನಡೆಸಿ ಅನ್ವರ್ ಶಿಸ್ತನ್ನು ಉಲ್ಲಂಘಿಸಿದ್ದಾರೆ. ಅನ್ವರ್ ವಿರುದ್ಧ ಪೋನ್ ಸೋರಿಕೆ ಆರೋಪವನ್ನು ಪರಿಶೀಲಿಸಬೇಕು, ಅನ್ವರ್‌ರನ್ನು ಪಕ್ಷದ ಯಾರೂ  ಬೆಂಬಲಿ ಸುವುದಿಲ್ಲ ಎಂದು ಎಂ.ವಿ. ಗೋ ವಿಂದನ್ ತಿಳಿಸಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡಾ ನಿನ್ನೆ ದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಅನ್ವರ್ ಹೊರಿಸಿದ ಎಲ್ಲಾ ಆರೋಪಗಳನ್ನೂ ತಿರಸ್ಕರಿಸಿದ್ದಾರೆ. ಅನ್ವರ್ ಎಲ್‌ಡಿಎಫ್‌ನ ಶತ್ರುಗಳೊಂದಿಗೆ ಕೈಜೋಡಿಸುತ್ತಿದ್ದಾರೆಂದೂ ಅವರು ಆರೋಪಿಸಿದ್ದಾರೆ. 

You cannot copy contents of this page