ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲೇ ವಕ್ಫ್ ಮಸೂದೆ ಮಂಡನೆ- ಅಮಿತ್ ಶಾ

ನವದೆಹಲಿ: ಸಂಸತ್ತಿನ ಹಾಲಿ ಅಧಿವೇಶನದಲ್ಲೇ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಮಂಡಿಸಲಾಗುವುದೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ವಕ್ಫ್ (ತಿದ್ದುಪಡಿ) ಮಸೂದೆಯನ್ನು 2024 ಆಗಸ್ಟ್‌ನಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ  ಕಳುಹಿಸಿಕೊಡಲಾಗಿತ್ತು. ಅದನ್ನು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲಿ ಮತ್ತೆ ಮಂಡಿಸಲಾಗುವುದು. ಪ್ರಸ್ತುತ ನಡೆಯುತ್ತಿರುವ ಸಂಸತ್ ಬಜೆಟ್ ಅಧಿವೇಶನವು ಎಪ್ರಿಲ್ 4ರಂದು ಕೊನೆಗೊಳ್ಳಲಿದೆ. ಅದರೊಳಗಾಗಿ ಈ ಮಸೂದೆಯನ್ನು ಮತ್ತೆ ಸಂಸತ್‌ನಲ್ಲಿ ಮಂಡಿಸಲಿದ್ದೇವೆ. ನರೇಂದ್ರ ಮೋದಿ ಸರಕಾರವು ಸಂವಿಧಾನದ ಚೌಕಟ್ಟಿಗೆ ಅನುಗುಣವಾಗಿ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಿರುವುದರಿಂದಾಗಿ ಉದ್ದೇಶಿತ ಶಾಸನಕ್ಕೆ ಮುಸ್ಲಿಮರು ಹೆದರಬೇಕಾಗಿಲ್ಲ. ವಿರೋಧ ಪಕ್ಷಗಳು ಮುಸ್ಲಿಮರನ್ನು ದಾರಿ ತಪ್ಪಿಸುತ್ತಿವೆ. ಮುಸ್ಲಿಮರ ಯಾವುದೇ ಹಕ್ಕುಗಳನ್ನು ಹತ್ತಿಕ್ಕಲಾಗುವುದಿಲ್ಲವೆಂದೂ ಅವರು ಹೇಳಿದ್ದಾರೆ.

RELATED NEWS

You cannot copy contents of this page