ಸಂಸತ್ತಿನ ಮುಂಗಾರು ಅಧಿವೇಶನ ಆರಂಭ: ಆಪರೇಷನ್ ಸಿಂಧೂರ್ ಭಾರತದ ಶಕ್ತಿಯನ್ನು ವಿಶ್ವಕ್ಕೆ ಅನಾವರಣಗೊಳಿಸಿದೆ- ಪ್ರಧಾನಮಂತ್ರಿ
ನವದೆಹಲಿ: ಒಂದು ತಿಂಗಳ ತನಕ ಮುಂದುವರಿಯಲಿರುವ ಸಂಸತ್‌ನ ಮುಂಗಾರು ಅಧಿವೇಶನ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ನಡೆಸಿದ ಭಯೋತ್ಪಾದನೆ ಬಳಿಕ ಮೊದಲ ಅಧಿವೇಶನವೂ ಇದಾಗಿದೆ ಎಂಬ ವಿಶೇಷತೆಯೂ ಇದಕ್ಕಿದೆ.
ಅಧಿವೇಶನ ಆರಂಭಗೊಳ್ಳುವ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ನಡೆಸಲಾದ ಆಪರೇಶನ್ ಸಿಂಧೂರ್ ಕಾರ್ಯಾಚರಣೆ ಭಾರತದ ಶಕ್ತಿಯನ್ನು ಇಡೀ ವಿಶ್ವಕ್ಕೇ ಅನಾವರಣಗೊಳಿಸಿದೆ. ಆ ಮೂಲಕ ಪಾಕಿಸ್ತಾನದ ಭಯೋತ್ಪಾದನೆಯ ಮೂಲವನ್ನೇ ನಿರ್ಮೂಲನೆ ಗೊಳಿಸಲಾಗಿದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಶೇ. 100ರಷ್ಟು ಯಶಸ್ವಿಯಗೊಂಡಿದೆ.
ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿಗ್ರಹಿಸಲಾಗುವುದು. ಅದೇ ರೀತಿ ದೇಶದಲ್ಲಿ ಮಾವೋವಾದಿ ಗಳನ್ನು ಬೇರು ಸಹಿತ ಕಿತ್ತು ಹಾಕಲಾಗು ವುದು. ಭಾರತ ಇಂದು ಪ್ರಗತಿಯತ್ತ ಸಾಗುತ್ತಿದೆ. ಭಾರತ ಇಂದು ಜಗತ್ತಿನ ತೃತೀಯ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ. ಬೆಲೆಯೇರಿಕೆ ಮತ್ತು ಹಣ ದುಬ್ಬರವನ್ನು ನಿಯಂತ್ರಿಸಲು ಸಾಧ್ಯ ವಾಗಿದೆ. ಭಯೋತ್ಪಾದನೆ ವಿರುದ್ಧ ಇಡೀ ದೇಶವೇ ಒಂದಾಗಿರುವುದನ್ನು ಆಪರೇ ಷನ್ ಸಿಂಧೂರಾ ತೋರ್ಪಡಿಸಿದೆ ಎಂದು ಪ್ರಧಾನಿ ಹೇಳಿದರು.
ಪಹಲ್ಗಾಮ್ ದಾಳಿ ಬಳಿಕದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಯಂತೆ ಭಾರತ -ಪಾಕ್ ಮಧ್ಯೆ ನಡೆದ ಯುದ್ಧದ ಸ್ಥಗಿತ ಕುರಿತು ಅಮೆರಿಕಾ ಅಧ್ಯಕ್ಷರು ನೀಡಿದ ಹೇಳಿಕೆ, ಇತ್ತೀಚೆಗಿನ ಏರ್ ಇಂಡಿಯಾ ವಿಮಾನ ಪತನ, ಬಿಹಾರ ದಲ್ಲಿನ ಮತಪಟ್ಟಿ ಪರಿಷ್ಕರಣೆ, ಇತ್ಯಾದಿ ಗಳ ವಿಷಯಗಳನ್ನು ಮುಂದಿರಿಸಿಕೊಂಡು ಅಧಿವೇಶನದಲ್ಲಿ ಸರಕಾರ ಮೇಲೆ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ. ಪ್ರತಿಪಕ್ಷಗಳನ್ನು ಮಣಿಸಲು ಕೇಂದ್ರ ಸರಕಾರ ಪ್ರತಿತಂತ್ರವನ್ನೂ ರೂಪಿಸಿದೆ.