ಸಂಸತ್ ಮೇಲೆ ದಾಳಿ : ಬಂಧಿತರ ವಿರುದ್ಧ ಯು.ಎ.ಪಿ.ಎ ಪ್ರಕಾರ ಪ್ರಕರಣ ದಾಖಲು
ನವದೆಹಲಿ: ೨೦೦೧ರಂದು ಸಂ ಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ೨೨ನೇ ವಾರ್ಷಿಕ ದಿನವಾದ ನಿನ್ನೆ ಸಂಸತ್ತಿನ ಒಳಗೆ ಗ್ಯಾಸ್ ಕ್ಯಾನ್ಸಿಸ್ಟರ್ ಬಳಸಿ ದಾಳಿ ನಡೆಸಿದ ಹಾಗೂ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿರುವ ಆರೋ ಪಿಗಳ ವಿರುದ್ಧ ಯುಎಪಿಎ (ದೇ ದ್ರೋಹ ತಡೆ ಕಾನೂನು) ಹಾಗೂ ಇತರ ಹಲವು ಸೆಕ್ಷನ್‌ಗಳ ಪ್ರಕಾರ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ಆದರೆ ಈ ಆರೋಪಿಗಳು ಯಾವುದೇ ಉಗ್ರಗಾಮಿ ಸಂಘಟನೆ ಗಳೊಂದಿಗೆ ಸದ್ಯ ಗುರುತಿಸಿಕೊಂಡವರಲ್ಲ ಎಂದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತಿಳಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರನ್ನು ಪೊಲೀಸರು ಇಂದು ಮತ್ತೆ ತೀವ್ರ ವಿಚಾರಣೆಗೊಳಪಡಿ ಸುತ್ತಾರೆ. ಸಂಸತ್ತಿನಭದ್ರತಾ ಲೋಪದ ಬಗ್ಗೆ ತನಿಖೆ ನಡೆಸಲು ಗೃಹಸಚಿವಾಲಯ ನೀಡಿರುವ ಆದೇಶ ಪ್ರಕಾರ ಸಿ.ಆರ್. ಪಿ.ಎಫ್‌ನ ಡಿ.ಜಿ. ಅನೀಶ್ ದಯಾಳ್ ಸಿಂಗ್‌ರ ನೇತೃತ್ವದಲ್ಲಿ ಭದ್ರತಾ ಏಜೆನ್ಸಿಗಳು ಮತ್ತು ತಜ್ಞರು ಒಳಗೊಂಡ ತನಿಖಾಸಮಿತಿಯನ್ನು ರಚಿಸಲಾಗಿದೆ.
ಭದ್ರತಾ ಲೋಪ ಉಲ್ಲಂಘಿಸಲು ಕಾರಣದ ಬಗ್ಗೆಯೂ ಸಮಿತಿ ತನಿಖೆ ನಡೆಸಲಿದೆ ಮಾತ್ರವಲ್ಲ, ಭದ್ರತೆಯನ್ನು ಸುಧಾರಿಸುವ ಸಲಹೆಗಳನ್ನೂ ಸಮಿತಿ ನೀಡಲಿದೆ. ಸಂಸತ್ತ್ ಭವನದ ಒಳಗೆ ದಾಳಿ ನಡೆಸಿದ ಮೈಸೂರು ನಿವಾಸಿ ಕಂಪ್ಯೂಟರ್ ಇಂಜಿನಿಯರ್ ಮನೆಯ ಮನೋರಂಜನ್, ಲಕ್ನೋದ ರಿಕ್ಷಾ ಚಾಲಕ, ಈಗ ಬೆಂಗಳೂರಿನಲ್ಲಿ ನೆಲೆಸಿರುವ ಸಾಗರ್ ಶರ್ಮಾ, ಗುರು ಗ್ರಾಮದ ಲಲಿತ್, ವಿಕ್ರಮ್ ಮಹಾ ರಾಷ್ಟ್ರ ಲಾತೂರ್ ನಿವಾಸಿ ಅಮೋಲ್ ಶಿಂಧೆ ಮತ್ತು ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸಿದ ಪರಿಣಾಮದ ಹಿಸಾರ್ ನಿವಾಸಿ ನೀಲಂಕೌರ್ ಮತ್ತು ದಾಳಿ ಯೋಜನೆಯ ಪ್ರಧಾನ ಸೂತ್ರಧಾರನನ್ನೂ ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಉನ್ನತ ವ್ಯಾಸಂಗ ಹೊಂದಿದವರಾಗಿದ್ದಾರೆ. ೨೦೦೧ರ ಸಂಸತ್ ದಾಳಿಯ ೨೨ನೇ ವಾರ್ಷಿಕ ದಿನವಾದ ನಿನ್ನೆ ಈ ದಾಳಿ ನಡೆಸಲಾಗಿದ್ದು, ಅದನ್ನು ಕೇಂದ್ರ ಸರಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ಆಗಂತಕರು ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ಪರಿಚಯಗೊಂಡವರಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕವೇ ಅವರು ಸಂಸತ್ತಿನ ಮೇಲೆ ದಾಳಿ ನಡೆಸಲು ಯೋ ಜನೆ ರೂಪಿಸಿದ್ದಾರೆಂಬುದು ಪೊಲೀಸ್ ತನಿಖೆಯಲ್ಲಿಯೂ ಸ್ಪಷ್ಟಗೊಂಡಿದೆ.