ಸಿದ್ಧರಾಮಯ್ಯರಿಂದ ತಳಿಪರಂಬ ಕ್ಷೇತ್ರಕ್ಕೆ ಚಿನ್ನದ ಕೊಡ ಸಮರ್ಪಣೆ

ಕಾಸರಗೋಡು: ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ನೀಡಿದ ಶತ್ರುಭೈರವಿ ಯಾಗ, ಮೃಗಬಲಿ ಹೇಳಿಕೆ ವಿವಾದ ವಾದ ಸಂದರ್ಭದಲ್ಲೇ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ತಳಿಪರಂಬ ಶ್ರೀ ರಾಜರಾಜೇಶ್ವರ ಕ್ಷೇತ್ರಕ್ಕೆ  ಹೊನ್ನಿನ ಕೊಡ ಸಮರ್ಪಿಸಿರುವುದಾಗಿ ತಿಳಿದು ಬಂದಿದೆ. ಕಳೆದ ತಿಂಗಳ 27, 28ರ ದಿನಗಳಲ್ಲಿ ಮುಖ್ಯಮಂತ್ರಿಯ ಖಾಸಗಿ ಕಾರ್ಯದರ್ಶಿ ಗೋವಿಂದರಾಜ್ ಎಂಬವರು ಕ್ಷೇತ್ರಕ್ಕೆ ತಲುಪಿ ಚಿನ್ನದ ಕೊಡ ಸಲ್ಲಿಸಿದ್ದಾರೆಂದು ಹೇಳಲಾಗುತ್ತಿದೆ. ಇದೇ ವೇಳೆ 27, 28ರಂದು ಚಂದೇರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಪ್ರಸಿದ್ಧ ದೈವಸ್ಥಾನವೊಂದರಲ್ಲಿ ನಡೆದ ಕಳಿಯಾಟ ಮಹೋತ್ಸವದ ಸಂದರ್ಭದಲ್ಲಿ ಈ ಪರಿಸರದ ಒಂದು ಪ್ರಸಿದ್ಧ ಕುಟುಂಬದಲ್ಲಿ ವಾಮಾಚಾರ ನಡೆಸಲಾಗಿದೆ ಎಂಬ ಬಗ್ಗೆಯೂ ಮಾಹಿತಿ ಬಹಿರಂಗಗೊಂಡಿದೆ.

You cannot copy contents of this page