ಸಿನೆಮಾ ಚಿತ್ರೀಕರಣ ವೇಳೆ ಕಾರು ಮಗುಚಿ ನಟ ಅರ್ಜುನ್ ಸೇರಿ ಮೂವರಿಗೆ ಗಾಯ
ಕೊಚ್ಚಿ: ಕೊಚ್ಚಿಯಲ್ಲಿ ಸಿನೆಮಾ ಶೂಟಿಂಗ್ ನಡೆಯುತ್ತಿದ್ದ ವೇಳೆ ಕಾರು ಮಗುಚಿ ಬಿದ್ದು ನಟರಾದ ನಾಯಕ ನಟ ಅರ್ಜುನ್ ಅಶೋಕನ್, ಮ್ಯಾಥ್ಯು ಥೋಮಸ್ ಮತ್ತು ಸಂಗೀತ್ ಪ್ರತಾಪ್ ಗಾಯಗೊಂಡ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿ ಅಮಿತ ವೇಗದಲ್ಲಿ ಕಾರು ಚಲಾಯಿಸಿದ ಆರೋಪದಂತೆ ಇನ್ನೊಂದೆಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅರ್ಜುನ್ ಮತ್ತು ಮ್ಯಾಥ್ಯು ಥೋಮಸ್ ಪ್ರಧಾನವೇಷದಲ್ಲಿ ನಟಿಸುತ್ತಿರುವ ‘ಬ್ರೊಮಾನ್ಸ್’ ಎಂಬ ಸಿನೆಮಾದ ಚಿತ್ರೀಕರಣ ನಡೆಯು ತ್ತಿದ್ದ ವೇಳೆ ಕೊಚ್ಚಿ ಎಂ.ಜಿ. ರಸ್ತೆಯಲ್ಲಿ ಇಂದು ಮುಂಜಾನೆ ಸುಮಾರು 1.30ರ ವೇಳೆ ಕಾರು ಅಪಾತ ಕ್ಕೊಳಗಾಗಿ ತಲೆಕೆಳಗಾಗಿ ಮಗುಚಿ ಬಿದ್ದಿದೆ. ಆ ವೇಳೆ ಆ ಕಾರಿನಲ್ಲಿದ್ದ ಅಶೋಕ್ ಅರ್ಜುನ್, ಮ್ಯಾಥ್ಯು, ಸಂಗೀತ್, ಪ್ರತಾಪ್ ಸೇರಿದಂತೆ ಐದು ಮಂದಿ ಗಾಯಗೊಂಡಿದ್ದಾರೆ. ಸಿನೆಮಾದ ಸ್ಟೆಂಟ್ ಮಾಸ್ತರ್ ಕಾರು ಚಲಾಯಿಸು ತ್ತಿದ್ದರು. ಕಾರು ಸಾಗುತ್ತಿದ್ದ ವೇಳೆ ರಸ್ತೆ ಪಕ್ಕ ಎರಡು ಬೈಕ್ ಗಳಿಗೂ ಅದು ಢಿಕ್ಕಿ ಹೊಡೆದು ಇಬ್ಬರು ಬೈಕ್ ಪ್ರಯಾ ಣಿಕರೂ ಗಾಯ ಗೊಂಡಿದ್ದಾರೆ. ಗಾಯಾಳು ಗಳನ್ನು ಬಳಿಕ ಆಸ್ಪತ್ರೆಗೆ ಸಾಗಿಸಲಾಗಿದೆ.