ಸಿಪಿಐ ಹಿರಿಯ ನೇತಾರ ಪಿ. ರಾಘವ ಸಂಸ್ಮರಣೆ

ಮಂಜೇಶ್ವರ: ಸಿಪಿಐಯ ಹಿರಿಯ ನೇತಾರರಾಗಿದ್ದ ಪಿ. ರಾಘವರವರ ೧೫ನೇ ಸಂಸ್ಮರಣೆ ವಾರ್ಷಿಕ ನಿನ್ನೆ ಅವರ ಮನೆ ಬಳಿಯ  ಕುಂಜತ್ತೂರುಪದವು ಸ್ಮೃತಿ ಮಂಟಪದಲ್ಲಿ ಪುಷ್ಪಾರ್ಚನೆ ಮೂಲಕ ಜರಗಿತು. ಬಿಕೆಎಂಯು ಮುಖಂಡ ಗಂಗಾಧರ ಕೊಡ್ಡೆ ಅಧ್ಯಕ್ಷತೆ ವಹಿಸಿದರು. ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಎಸ್. ರಾಮಚಂದ್ರ ಪುಷ್ಪಾರ್ಚ ನೆಗೈದು ಉದ್ಘಾಟಿಸಿದರು. ಸಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ರಾಮಕೃಷ್ಣ ಕಡಂಬಾರ್, ಎಐಟಿಯುಸಿ ಜಿಲ್ಲಾಧ್ಯಕ್ಷ ಮುಸ್ತಫ ಕಡಂಬಾರ್, ಶ್ರೀಧರ ಆರ್.ಕೆ, ನಾರಾಯಣ ಕಾಜೂರ್, ಯತೀಶ್ ಬಿ.ಎಂ, ಉಮೇಶ್ ಪದವು, ಧನರಾಜ್ ಕೀರ್ತೇಶ್ವರ, ಚಂದ್ರಶೇಖರ ಮೀಯಪದವು, ಕಿರಣ್ ಮಾಡ, ಗಣೇಶ್ ಕುಂಜತ್ತೂರು, ಕೇಶವ ಕಣ್ವತೀರ್ಥ ಸಹಿತ ಹಲವರು ಭಾಗವಹಿಸಿದರು.

You cannot copy contents of this page