ಕಲ್ಲಿಕೋಟೆ ಬಳಿ ರೈಲಿಗೆ ಕಲ್ಲೆಸೆತ: ಯುವತಿಗೆ ಗಾಯ

ಕಲ್ಲಿಕೋಟೆ: ಕಲ್ಲಿಕೋಟೆ ಸಮೀಪ ಸಂಚರಿಸುತ್ತಿದ್ದ ರೈಲಿನ ಮೇಲೆ ಕಲ್ಲೆಸೆತವುಂಟಾಗಿದ್ದು   ಇದ ರಿಂದ  ಪ್ರಯಾಣಿಕೆ ಗಾಯಗೊಂ ಡಿದ್ದಾರೆ.  ವಡಗರ ಪುರಮೇರಿ ಎರಂ ಞೋಳಿ ತಾಯಕುನಿಯದ ಐಶ್ವರ್ಯ ರಾಮಕೃಷ್ಣ (೧೮) ಎಂಬವರು  ಗಾಯಗೊಂಡಿದ್ದಾರೆ.  ಇವರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಆಲುವಾದಿಂದ  ವಡಗರೆಗೆ ಪ್ರಯಾ ಣಿಸುತ್ತಿದ್ದರು.  ಕಲ್ಲು ಐಶ್ವರ್ಯರ ಮುಖಕ್ಕೆ ಬಡಿದಿದ್ದು, ಇದರಿಂದ ಇವರ ಮೂರು ಹಲ್ಲುಗಳು ಕಿತ್ತುಹೋಗಿದ್ದು, ತುಟಿಗೂ ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ. ರೈಲುಗಾಡಿ ಕಡಲುಂಡಿ ಸೇತುವೆ ಹಾಗೂ  ಫರೋಕ್‌ನ ಮಧ್ಯೆ ತಲುಪಿದಾಗ ನಿನ್ನೆ ರಾತ್ರಿ ೧೦ ಗಂಟೆ ವೇಳೆ ಕಲ್ಲೆಸೆತವುಂಟಾಗಿದೆ.  

You cannot copy contents of this page