ಸೇತುವೆ ಶೋಚನೀಯಾವಸ್ಥೆಯಲ್ಲಿ ಸ್ಥಳೀಯರಿಗೆ ಆತಂಕ

ನಾರಂಪಾಡಿ: ಚೆಂಗಳ ಪಂಚಾಯತ್‌ನ ನಾರಂಪಾಡಿ- ಅರ್ಲಡ್ಕ ವಾರ್ಡ್‌ಗಳನ್ನು ಸಂಪರ್ಕಿಸುವ ಚೆಂಡತ್ತೋಡಿ- ಬಂಡುಂಗುಳಿ ಸೇತುವೆ ಅಪಾಯ ಸ್ಥಿತಿಯಲ್ಲಿದೆ. ನೂರಾರು ಮಂದಿ ದಿನಂಪ್ರತಿ ಸಂಚರಿಸುವ ಈ ಸೇತುವೆಯನ್ನು ದಶಕಗಳ ಹಿಂದೆ ನಿರ್ಮಿಸಲಾಗಿದೆ. ಈಗ ಇದು ಶೋಚನೀಯಾವಸ್ಥೆಯಲ್ಲಿದ್ದು, ಬದಿಯ ತಡೆಬೇಲಿ ಕೂಡಾ ಇಲ್ಲದೆ ಭೀತಿ ನೆಲೆಗೊಂಡಿದೆ. ಸೇತುವೆಯ ಕಾಂಕ್ರೀಟ್ ಬಿದ್ದು ಬಿರುಕು ಕಂಡು ಬಂದಿದೆ. ಕಬ್ಬಿಣದ ಸರಳುಗಳು ಕಂಡುಬರುತ್ತಿದ್ದು, ತುಕ್ಕು ಹಿಡಿದು ನಾಶವಾಗಿ ಅಪಾಯ ಆಹ್ವಾನಿಸುತ್ತಿದೆ. ಇಲ್ಲಿ ನೂತನ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page