ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ವಿಭಜನೆಗೆ ಸಚಿವ ಸಂಪುಟದ ಅಸ್ತು

ತಿರುವನಂತಪುರ: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ವಿಭಜನೆ ಮತ್ತು ವಾರ್ಡ್‌ಗಳ ಸಂಖ್ಯೆ ಹೆಚ್ಚಿಸುವ ತೀರ್ಮಾನಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅಂಗೀಕಾರ ನೀಡಿದೆ. ಇದಕ್ಕಾಗಿ ಪ್ರತ್ಯೇಕವಾಗಿ ಎರಡು ಆಧ್ಯಾದೇಶಗಳನ್ನು ಹೊರಡಿಸುವ ತೀರ್ಮಾನವನ್ನೂ ಸಭೆ ಕೈಗೊಂಡಿದೆ. ಇದರಂತೆ 2011ರ ಜನಸಂಖ್ಯೆ ಅನುಪಾತಕ್ಕೆ ಹೊಂದಿಕೊಂಡು ವಾರ್ಡ್‌ಗಳ ಗಡಿಗಳನ್ನೂ ಪುನರ್‌ವಿಂಗ ಡಿಸಲಾಗುವುದು ಮಾತ್ರವಲ್ಲ 2021ರ ಜನಗಣತಿ ಆಧಾರದಲ್ಲಿ ವಾರ್ಡ್‌ಗಳನ್ನು ಪುನರ್‌ವಿಂಗಡಿಸಲಾಗುವುದು. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಆಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

You cannot copy contents of this page