‘ಹಮಾಸ್‌ನಂತೆಯೇ ಜಮ್ಮು-ಕಾಶ್ಮೀರದಲ್ಲೂ ದಾಳಿ’ ಕಾಶ್ಮೀರ ಫೈಟ್ ಉಗ್ರಗಾಮಿ ಸಂಘಟನೆಯ ಬೆದರಿಕೆ
ನವದೆಹಲಿ: ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿದ ರೀತಿಯಲ್ಲೇ ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿ ನಡೆಸುತ್ತೇವೆ ಎಂದು ಕಾಶ್ಮೀರ ಫೈಟ್ ಎಂಬ ಹೊಸ ಭಯೋತ್ಪಾದಕ ಸಂಘಟನೆ ಕೇಂದ್ರ ಸರಕಾರಕ್ಕೆ ಪತ್ರ ಮೂಲಕ ಬೆದರಿಕೆ ಹಾಕಿದೆ.
ಕಾಶ್ಮೀರದ ಪ್ರವಾಸಿಗರು, ಸ್ಥಳೀಯರಲ್ಲದೆ ಭದ್ರತಾಪಡೆಗಳನ್ನು ಗುರಿಯನ್ನಾಗಿಸುವಂತೆಯೂ ಭಯೋತ್ಪಾದಕ ಸಂಘಟನೆ ತನ್ನ ಸದಸ್ಯರಿಗೆ ಸೂಚಿಸಿದೆ. ಅಲ್ಲದೆ ಪ್ರಧಾನಮಂತ್ರಿ ಮತ್ತು ಗೃಹ ಸಚಿವರನ್ನು ಪ್ರಧಾನ ಗುರಿಯನ್ನಾಗಿಸು ವಂತೆಯೂ ಈ ಬೆದರಿಕೆ ಪತ್ರದಲ್ಲಿ ತನ್ನ ಸದಸ್ಯರಿಗೆ ಈ ಸಂಘಟನೆ ಸೂಚನೆ ನೀಡಿದೆ.
ವಿಶೇಷವಾಗಿ ಉನ್ನತ ವ್ಯಕ್ತಿ ಗಳನ್ನು ಗುರಿಯನ್ನಾಗಿಸಲಾಗುವುದು. ಗಾಜಾದಲ್ಲಿ ನಡೆಯುತ್ತಿರುವ ಹತ್ಯಾಕಾಂಡವು ವಿಶ್ವಸಂಸ್ಥೆ ಅಥವಾ ಇತರ ಮಾನವಹಕ್ಕುಗಳ ಗುಂಪು ಗಳು ಮತ್ತು ದೇಶಗಳಿಂದ ನಿರೀಕ್ಷೆ ಹೊಂದಿರುವ ಎಲ್ಲರ ಕಣ್ಣು ತೆರೆಸುವಂತಿದೆಯೆಂದು ಸಂಘಟನೆ ಬೆದರಿಕೆ ಪತ್ರದಲ್ಲಿ ಬರೆಯಲಾಗಿದೆ. ಹೈಪ್ರೊಫೈಲ್ ವ್ಯಕ್ತಿಗಳು, ಭಾರತೀಯ ಆಡಳಿತ, ಭಾರತೀಯ ಭದ್ರತಾ ಏಜೆನ್ಸಿ ಕಚೇರಿಗಳನ್ನು ಗುರಿಯನ್ನಾಗಿ ಸಬೇಕು. ಬೀದಿಗಳಲ್ಲಿ ದಾಳಿ ನಡೆಸಿ ರಕ್ತ ಚೆಲ್ಲಿಸಬೇಕು ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.
ಈ ಬೆದರಿಕೆ ಪತ್ರದಲ್ಲಿ ಕೇಂದ್ರ ಗೃಹಖಾತೆ ಮತ್ತು ಕೇಂದ್ರ ಗುಪ್ತಚರ ವಿಭಾಗಗಳು ಅತೀ ಗಂಭೀರವಾಗಿ ಪರಿಗಣಿಸಿತ್ತು. ಆದ್ದರಿಂದ ಈ ಭಯೋತ್ಪಾದಕ ಸಂಘಟನೆಯ ನೇತಾರರು ಮತ್ತು ಸದಸ್ಯರನ್ನು ಗುರಿಯಾಗಿಸಿಕೊಂಡು ಭಾರೀ ಕಾರ್ಯಾಚರಣೆಗೂ ತೊಡಗಿದೆ.