ಹಳಿ ದಾಟುತ್ತಿದ್ದಾಗ ರೈಲು ಢಿಕ್ಕಿ ಹೊಡೆದು ಮಹಿಳೆ ಮೃತ್ಯು

ಉಪ್ಪಳ: ಹಳಿದಾಟುತ್ತಿದ್ದಾಗ ರೈಲು sಢಿಕ್ಕಿ ಹೊಡೆದು ಮಹಿಳೆಯೋವೆÀð ಮೃತಪಟ್ಟ್ಟಿದ್ದಾರೆ. ಉಪ್ಪಳ ರೈಲ್ವೇ ನಿಲ್ದಾಣ ಬಳಿಯ ನಿವಾಸಿ ದಿ| ಪರಮೇಶ್ವರ – ದಿ| ಪುತ್ತಮ್ಮ ದಂಪತಿ ಪುತ್ರಿ ಚಂದ್ರಾವತಿ (೫೩) ಮೃತಪಟ್ಟವರು. ನಿನ್ನೆ ಸಂಜೆ ಘಟನೆ ನಡೆದಿದೆ. ಸಮುದ್ರ ತೀರದಲ್ಲಿ ರುವ ತರವಾಡು ಮನೆಯಿಂದ ಮನೆಗೆ ತೆರಳುತ್ತಿದ್ದಾಗ ಮನೆ ಪರಿಸರದ ಹಳಿದಾ ಟುತ್ತಿದ್ದಂತೆ ಮಂಗಳೂರಿನಿAದ ಕಾಸರ ಗೋಡಿಗೆ ಆಗಮಿಸುತ್ತಿದ್ದ ಎಕ್ಸ್ಪ್ರೆಸ್ ರೈಲು ಗಾಡಿ ಢಿಕ್ಕಿಹೊಡೆದು ಪರಿಸರದ ಹೊಂಡಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತರು ಅವಿವಾಹಿತರಾಗಿದ್ದಾರೆ. ಸಹೋದರ ಶಶಿ ಮಾಸ್ತರ್, ಸಹೋದರಿಯರಾದ ಮೀನಾಕ್ಷಿ, ಜಯಂತಿ, ವಸಂತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಸಹೋದರ ಬಾಲಕೃಷ್ಣ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page