ಹೃದಯಾಘಾತದಿಂದ ಮಹಿಳೆ ನಿಧನ

ಉಪ್ಪಳ: ಇಚ್ಲಂಗೋಡು ಕೆದ್ವಾರ್ ನಿವಾಸಿ  ಸುಧಾಕರ ಶೆಟ್ಟಿಯವರ ಪತ್ನಿ ಯಶೋಧ (42) ನಿಧನ ಹೊಂದಿದರು. ಭಾನುವಾರ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗುತ್ತಿದ್ದಂತೆ ಹೃದಯಾಘಾತ ಉಂಟಾಗಿದ್ದು, ಕೂಡಲೇ ಬಂದ್ಯೋಡು ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಇಚ್ಲಂಗೋಡು ಎಎಲ್‌ಪಿ ಶಾಲೆ (ಜನರಲ್) ಇದರ ಮಾತೃಮಂಡಳಿ ಅಧ್ಯಕ್ಷೆಯಾಗಿದ್ದಾರೆ. ಮೃತರು ಪತಿ, ಮಕ್ಕಳಾದ ಶ್ರಾವ್ಯ, ಸನ್ವಿತ್ ಸಹೋದರ ರವೀಂದ್ರ, ಸಹೋದರಿ ಸಂಪ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ತಂದೆ ನಾರಾಯಣ ರೈ, ತಾಯಿ ದೇವಕಿ ಈ ಹಿಂದೆ ನಿಧನರಾಗಿದ್ದಾರೆ. ಅಂತ್ಯ ಸಂಸ್ಕಾರ ನಿನ್ನೆ ಸಂಜೆ ಮನೆ ಬಳಿಯಲ್ಲಿ ನಡೆಯಿತು.

You cannot copy contents of this page